2024-12-24 06:34:31

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

20 ವರ್ಷಗಳಲ್ಲಿ ಏಕಾಏಕಿ ಹೆಚ್ಚಳ ಕಂಡ ಚಂಡಿಪುರ ವೈರಸ್ ಪ್ರಕರಣ, ಎಚ್ಚರಿಕೆ ನೀಡಿದ WHO

ಪ್ರಸ್ತುತ ಭಾರತದಲ್ಲಿ ಚಂಡಿಪುರ ವೈರಸ್ ಹೆಚ್ಚಾಗಿದ್ದು, 20 ವರ್ಷಗಳಲ್ಲಿ ಏಕಾಏಕಿ ಹೆಚ್ಚಳ ಕಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸಿದೆ. ಡಬ್ಲ್ಯುಎಚ್ಒ ಪ್ರಕಾರ, ಜೂನ್ ಆರಂಭದಿಂದ ಆಗಸ್ಟ್ 15 ರ ನಡುವೆ, ಆರೋಗ್ಯ ಸಚಿವಾಲಯವು, ಎಇಎಸ್ (AES) (ತೀವ್ರವಾದ ಎನ್ಸೆಫಾಲಿಟಿಸ್ ಸಿಂಡ್ರೋಮ್) ನ 245 ಪ್ರಕರಣಗಳನ್ನು ವರದಿ ಮಾಡಿದ್ದು, ಇದರಲ್ಲಿ 82 ಸಾವುಗಳು ಸೇರಿವೆ. ಭಾರತದ ಒಟ್ಟು 43 ಜಿಲ್ಲೆಗಳಲ್ಲಿ ಪ್ರಸ್ತುತ ಎಇಎಸ್ ಪ್ರಕರಣಗಳು ವರದಿಯಾಗುತ್ತಿವೆ. ಇವುಗಳಲ್ಲಿ 64 ಪ್ರಕರಣಗಳು ಚಂಡಿಪುರ ವೈರಸ್ (CHPV) ಸೋಂಕು ಎಂದು ದೃಢಪಟ್ಟಿದೆ.

“ಚಂಡಿಪುರ ವೈರಸ್ ಭಾರತದ ಪಶ್ಚಿಮ, ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿ, ವಿಶೇಷವಾಗಿ ಮಳೆಗಾಲದಲ್ಲಿ ವಿರಳವಾದ ಪ್ರಕರಣಗಳು ಕಂಡು ಬರುತ್ತವೆ. ಗಮನಾರ್ಹವಾಗಿ, ಗುಜರಾತಿನಲ್ಲಿ ಪ್ರತಿ ನಾಲ್ಕರಿಂದ ಐದು ವರ್ಷಗಳಿಗೊಮ್ಮೆ ಸಿಎಚ್ ಪಿವಿ ಸೋಂಕು ಏಕಾಏಕಿ ಹೆಚ್ಚುತ್ತದೆ. ಈ ವೈರಸ್ ಬಾಕುಲೋವೈರಸ್‌ಗೆ ಸಂಬಂಧಿಸಿದೆ. ಅಂದರೆ ಸೊಳ್ಳೆಗಳು, ಮರಳು ನೊಣಗಳಂತಹ ವಾಹಕಗಳ ಕಡಿತದಿಂದ ಇದು ಹರಡುತ್ತದೆ.. ಸಿಎಚ್ ಪಿವಿ ಸೋಂಕಿನಿಂದ ಸಿಎಫ್ ಆರ್ ಹೆಚ್ಚಾಗಿದೆ (56- 75 ಪ್ರತಿಶತ) ಇದಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಅಥವಾ ಲಸಿಕೆ ಲಭ್ಯವಿಲ್ಲ. ಆರಂಭಿಕ ಹಂತದಲ್ಲಿ ರೋಗ ನಿರ್ಣಯ ಮಾಡಿ, ಆರೈಕೆ ಮಾಡಿದರೆ ಬದುಕುಳಿಯಬಹುದು” ಎಂದು ಡಬ್ಲ್ಯುಎಚ್ಒ ಹೇಳಿದೆ.

 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ತೀವ್ರ ಜ್ವರ ಅಥವಾ ಬೇರೆ ರೋಗ ಲಕ್ಷಣ ಕಂಡು ಬಂದರೆ ಅದನ್ನು ನಿರ್ಲಕ್ಷಿಸದೆಯೇ ಸರಿಯಾದ ಚಿಕಿತ್ಸೆ ನೀಡಬೇಕು. ಸಿಎಚ್ ಪಿವಿ ಪ್ರಸರಣವನ್ನು ನಿಯಂತ್ರಿಸಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದರೂ, ಮಳೆಗಾಲದಿಂದಾಗಿ ಇದನ್ನು ತಡೆಯುವುದು ಕಷ್ಟಕರ. ಅಲ್ಲದೆ ಮುಂಬರುವ ವಾರಗಳಲ್ಲಿ ವೈರಸ್ ಮತ್ತಷ್ಟು ಹರಡುವ ಸಾಧ್ಯತೆಯಿದೆ. ಇದನ್ನು ತಡೆಯಲು ಸೊಳ್ಳೆ ಮತ್ತು ಉಣ್ಣೆಗಳ ಕಡಿತದಿಂದ ಆದಷ್ಟು ರಕ್ಷಣೆ ಪಡೆಯಿರಿ” ಎಂದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸ್ಸು ಮಾಡಿದೆ.

“ಈ ವೈರಸ್ ನ ನಿಯಂತ್ರಣ ಮತ್ತು ತಡೆಗಟ್ಟುವ ಕ್ರಮಗಳನ್ನು ಜನರಿಗೆ ತಿಳಿಸುವುದಲ್ಲದೆ, ಸಮಗ್ರ ಕೀಟನಾಶಕ ಸಿಂಪಡಣೆ ಮತ್ತು ಹೊಗೆ ಹಾಕುವುದು ಇನ್ನಿತರ ಕ್ರಮ ಕೈಗೊಳ್ಳಲು ಸರಕಾರಗಳಿಂದ ಪೂರಕ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ಅದರ ರೋಗಲಕ್ಷಣಗಳು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗೆ ಮಾಹಿತಿ ನೀಡಲು ಉಪಕ್ರಮಗಳು ನಡೆಯುತ್ತಿವೆ. ಎನ್ಸೆಫಾಲಿಟಿಸ್‌ಗೆ ಕಾರಣವಾಗುವ ಇತರ ವೈರಸ್‌ಗಳನ್ನು ಗುರುತಿಸಲು ಗುಜರಾತ್ ಬಯೋಟೆಕ್ನಾಲಜಿ ರಿಸರ್ಚ್ ಸೆಂಟರ್ (ಜಿಬಿಆರ್ಸಿ) ಸಕ್ರಿಯವಾಗಿ ಸಂಶೋಧನೆ ನಡೆಸುತ್ತಿದೆ ಮತ್ತು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ” ಎಂದು ಡಬ್ಲ್ಯುಎಚ್ಒ ಹೇಳಿದೆ.

Post a comment

No Reviews