
ನಗರದಲ್ಲಿ ಸಂಚಲನ ಸೃಷ್ಟಿಸಿದ ವಕೀಲೆ ಚೈತ್ರಗೌಡ ಆತ್ಮಹತ್ಯೆ ಪ್ರಕರಣವನ್ನು ಪೊಲೀಸ್ ಕಮೀಷನರ್ ದಯಾನಂದ್ ಸಿಸಿಬಿಗೆ ವರ್ಗಾವಣೆ ಮಾಡಿದ್ದಾರೆ. ಕಳೆದ ಮೇ 11 ರಂದು ಸಂಜಯನಗರದಲ್ಲಿ ಚೈತ್ರಾಗೌಡ ಆತ್ಮಹತ್ಯೆಗೆ ಶರಣಾಗಿದ್ದರು ಎಂದು ದೂರು ದಾಖಲಾಗಿತ್ತು. ಚೈತ್ರಾಗೌಡ KIADB ಅಧಿಕಾರಿ ಶಿವಕುಮಾರ್ ಅವರ ಪತ್ನಿ ಆಗಿದ್ದರು, ಹೈ ಕೋರ್ಟ್ ವಕೀಲೆ ಆಗಿದ್ದ ಚೈತ್ರಾಗೌಡ ಅವರ ಆತ್ಮಹತ್ಯೆ ಸುತ್ತ ಹಲವಾರು ಅನುಮಾನಗಳು ಹುಟ್ಟಿಕೊಂಡಿದ್ದವು ಈ ಬಗ್ಗೆ ಬೆಂಗಳೂರು ವಕೀಲರ ಸಂಘದವರು ಇದು ಆತ್ಮಹತ್ಯೆ ಅಲ್ಲ ಎಂದು ಅನುಮಾನ ವ್ಯಕ್ತ ಪಡಿಸಿ ನಗರ ಆಯುಕ್ತ ದಯಾನಂದ್ ಅವರಿಗೆ ಪತ್ರ ಬರೆದಿದ್ದರು, ಚೈತ್ರ ಅತ್ಯಂತ ಧೈರ್ಯವಂತ ಮಹಿಳೆ ಉತ್ತಮ ಬ್ಯಾಡ್ಮಿಂಟನ್ ಪ್ಲೇಯರ್ ಆಗಿದ್ದರು, ಈ ಸಾವಿನ ಹಿಂದೆ ನಿಗೂಢ ಕಾರಣಗಳು ಇರಬಹುದೆಂದು ಅನುಮಾನಗಳು ಹುಟ್ಟಿಕೊಂಡಿದ್ದವು ಆದರೆ ಖಿನ್ನತೆಗೆ ಒಳಗಾಗಿರುವುದಾಗಿ, ತನ್ನ ಸಾವಿಗೆ ಯಾರು ಕಾರಣರಲ್ಲ ಎಂದು ಡೆತ್ ನೋಟ್ ಬರೆದು ಇಟ್ಟಿದ್ದರು. ಈಗ CCB ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದು ಚೈತ್ರ ಕಾಲ್ಲಿಸ್ಟ್ ತೆಗೆಯಲು ಮುಂದಾಗಿದ್ದು ಅಲ್ಲದೇ ಲಾಕ್ ಆಗಿರುವ ಚೈತ್ರ ಫೋನ್ ಅನ್ನು ಓಪನ್ ಮಾಡಿಸಿ ಸುಳಿವಿನ ಬೆನ್ನತ್ತಿದ್ದಾರೆ, ಅಲ್ಲದೆ ಕಳೆದ ಒಂದು ತಿಂಗಳ CCTV ದೃಶ್ಯಾವಳಿಗಳ ಮೇಲೆ ನಿಗಾವಹಿಸಿದ್ದಾರೆ, ಅಧಿಕಾರಿಗಳು ಚೈತ್ರಾರ ಮರಣೋತ್ತರ ಪರೀಕ್ಷಾ ವರದಿಗಾಗಿ ಕಾಯುತ್ತಿದ್ದು ವರದಿ ಬಂದ ನಂತರ ತನಿಖೆ ಶುರುವಾಗಲಿದೆ.
Poll (Public Option)

Post a comment
Log in to write reviews