ಮೊದಲ ದಿನವೇ ಸ್ವರ್ಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ರಾ ಚೈತ್ರಾ? - Bigg Boss season 11

ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದ ಬಿಗ್ ಬಾಸ್ ಸೀಸನ್ 11. ಆಟ ಈಗಾಗಲೇ ಶುರುವಾಗಿದೆ. ನೆನ್ನೆ ರಾತ್ರಿ ಮೊದಲ ದಿನದ ಸಂಚಿಕೆ ಪ್ರಸಾರವಾಗಿದ್ದು, ಅಸಲಿ ಆಟ ಶುರುವಾಗಿದೆ, ಮೊದಲ ದಿನವೇ ಚೈತ್ರಾ ಕುಂದಾಪುರ್ ದನಿಯೆತ್ತಿದ್ದಾರೆ.
ಮನೆ ಕೆಲಸದ ಜವಾಬ್ದಾರಿಯನ್ನು ನರಕ ನಿವಾಸಿಗಳು ಇಬ್ಬರು ಮಾಡಬೇಕು ಎಂದು ಟಾಸ್ಕ್ ಶುರುವಾಗಿದೆ. ಇದು ಮೊದಲ ಟಾಸ್ಕ್ ಆಗಿದ್ದು, ನರಕವಾಸಿಗಳಾದ ಚೈತ್ರಾ ಕುಂದಾಪುರ್ ಹಾಗೂ ಗೋಲ್ಡ್ ಸುರೇಶ್ ಮನೆ ಕೆಳಸ ಶುರು ಮಾಡಿಕೊಂಡಿದ್ದಾರೆ. ಚೈತ್ರಾ ಹಣ್ಣೊಂದನ್ನು ಸ್ವರ್ಗವಾಸಿಗಳ ಕೈಯಿಂದ ಕಿತ್ತು ತಿಂದಿದ್ದಾರೆ. ಇದು ವಾದ ವಿವಾದಕ್ಕೆ ಕಾರಣವಾಗಿದೆ. ಹಣ್ಣು ಕೂಡಾ ಟಾಸ್ಕ್ನ ಒಂದು ಭಾಗವಾಗಿರಬಹುದು. ಮಾತಿಗೆ ಮಾತು ಬೆಳದಂತೆ ಮಾತಾಡಬಾರದು ಎಂಬ ಸ್ಪರ್ಧಿಯ ದನಿಯೊಂದು ಕೇಳಿ ಬರುತ್ತದೆ. ಮಾತನಾಡಬಾರದು ಎಂದು ರೂಲ್ ಬುಕ್ನಲ್ಲಿದ್ದರೆ ಹೇಳಿ ಮಾತನಾಡಲ್ಲ ಎಂದು ಚೈತ್ರಾ ಗರಂ ಆಗಿದ್ದಾರೆ. ''ಮೊದಲ ದಿನವೇ ಸ್ವರ್ಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ರಾ ಚೈತ್ರಾ?.
ವಿಡಿಯೋ ವೈರಲ್ ಆಗುತ್ತಿದ್ದು, ಸೋಷಿಯಲ್ ಮೀಡಿಯಾ ಬಳಕೆದಾರರೋರ್ವರು ಕಾಮೆಂಟ್ ಮಾಡಿ, ''ಈ ಕ್ಷಣಕ್ಕೆ ಎಷ್ಟು ಜನ ಕಾತರದಿಂದ ಕಾಯುತಿದ್ದರು'' ಎಂದು ಪ್ರಶ್ನಿಸಿದ್ದಾರೆ. 'ಇವಾಗ್ ಸ್ಟಾರ್ಟ್ ಆಯ್ತು ನೋಡ್ರಿ' ಎಂದು ಮತ್ತೋರ್ವರು ಕಾಮೆಂಟ್ ಮಾಡಿದ್ದಾರೆ. 'ಹೊಸ ಅಧ್ಯಾಯ ಇವಾಗ ಶುರು' ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.
Poll (Public Option)

Post a comment
Log in to write reviews