2024-12-24 07:22:22

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಮೇಕ್‌ ಇನ್‌ ಇಂಡಿಯಾಗೆ ದಶಕದ ಸಂಭ್ರಮ

ನವದೆಹಲಿ: ಕೇಂದ್ರ ಸರ್ಕಾರದ ಬಹಳ ಮಹತ್ವಾಕಾಂಕ್ಷೆಯ ‘ಮೇಕ್ ಇನ್ ಇಂಡಿಯಾ’ ಯೋಜನೆ ಜಾರಿಗೆ ಬಂದು ಇವತ್ತಿಗೆ ಒಂದು ದಶಕ ಪೂರ್ಣವಾಗಿದೆ. ಈ ಸಂದರ್ಭದ ಸಂಭ್ರಮವನ್ನು ನರೇಂದ್ರ ಮೋದಿ ತಮ್ಮ ಲಿಂಕ್ಡ್ ಇನ್ ಪೋಸ್ಟ್​ನ ಬ್ಲಾಗ್​ನಲ್ಲಿ ಹಂಚಿಕೊಂಡಿದ್ದಾರೆ. ಸಂಘಟಿತ ಪ್ರಯತ್ನ, ಛಲ, ನಿರಂತರತೆ ಇವೆಲ್ಲವೂ ಕೂಡ ಮೇಕ್ ಇನ್ ಇಂಡಿಯಾ ಸಾಹಸವನ್ನು ಯಶಸ್ವಿಯಾಗಿ ಮುಂದುವರಿಸುತ್ತಿವೆ. ತಾನು ಊಹಿಸಲೂ ಆಗದಿರುವ ರೀತಿಯಲ್ಲಿ ವಿವಿಧ ವಲಯಗಳಲ್ಲಿ ಮೇಕ್ ಇನ್ ಇಂಡಿಯಾ ಪರಿಣಾಮ ಬೀರಿದೆ ಎಂದು ಮೋದಿ ಹೇಳಿಕೊಂಡಿದ್ದಾರೆ. ಕಳೆದ ಹತ್ತು ವರ್ಷದಲ್ಲಿ ಭಾರತದಲ್ಲಿ ಉತ್ಪಾದನಾ ಕ್ಷೇತ್ರ ಯಾವ ಪರಿ ಬೆಳೆದಿದೆ ಎಂದು ನೋಡಿದರೆ ಹೆಮ್ಮೆಯಾಗುತ್ತದೆ ಎಂದಿದ್ದಾರೆ.

ಮೊಬೈಲ್ ಮ್ಯಾನುಫ್ಯಾಕ್ಚರಿಂಗ್ ಹೇಗಿತ್ತು ಹೇಗಾಯ್ತು ನೋಡಿ…

2014ರಲ್ಲಿ ಇಡೀ ದೇಶದಲ್ಲಿ ಕೇವಲ ಎರಡು ಮೊಬೈಲ್ ತಯಾರಿಕಾ ಘಟಕಗಳಿದ್ದವು. ಇವತ್ತು ಆ ಸಂಖ್ಯೆ 200 ದಾಟಿದೆ. ಮೊಬೈಲ್ ರಫ್ತು 1,556 ಕೋಟಿ ರೂ ಮೊತ್ತದಿತ್ತು. ಈಗ 1.2 ಲಕ್ಷ ಕೋಟಿ ರೂಗೆ ಏರಿದೆ. ಇವತ್ತು ಭಾರತದಲ್ಲಿ ಬಳಸುವ ಶೇ. 99ರಷ್ಟು ಮೊಬೈಲ್ ಫೋನ್​ಗಳು ಮೇಡ್ ಇನ್ ಇಂಡಿಯಾದ್ದು. ಮೊಬೈಲ್ ತಯಾರಿಕೆಯಲ್ಲಿ ಭಾರತ ವಿಶ್ವದಲ್ಲೇ ಎರಡನೇ ಅತಿದೊಡ್ಡ ದೇಶವಾಗಿದೆ ಎಂದು ಬರೆದಿದ್ದಾರೆ ಪ್ರಧಾನಿ ಮೋದಿ.

ಮ್ಯಾನುಫ್ಯಾಕ್ಚರಿಂಗ್​ನಲ್ಲಿ ಭಾರತದ 10 ವರ್ಷಗಳ ಸಾಧನೆಗಳ ಝಲಕ್

  • ಉಕ್ಕು ಉತ್ಪನ್ನಗಳ ತಯಾರಿಕೆ ಶೇ. 50ರಷ್ಟು ಹೆಚ್ಚಳವಾಗಿದೆ. ಭಾರತ ನೆಟ್ ಎಕ್ಸ್​ಪೋರ್ಟರ್ ಆಗಿದೆ.
  • ಸೆಮಿಕಂಡಕ್ಟರ್ ತಯಾರಿಕೆ ವಲಯವು 1.5 ಲಕ್ಷ ಕೋಟಿ ರೂ ಮೌಲ್ಯದ ಹೂಡಿಕೆಗಳನ್ನು ಆಕರ್ಷಿಸಿದೆ. ಐದು ಘಟಕಗಳ ಸ್ಥಾಪನೆಗೆ ಅನುಮೋದನೆ ಸಿಕ್ಕಿದೆ. ದಿನಕ್ಕೆ ಒಟ್ಟು 7 ಕೋಟಿ ಚಿಪ್​ಗಳನ್ನು ತಯಾರಿಸುವ ಸಾಮರ್ಥ್ಯ ಭಾರತ್ಕಿದೆ.
  • ಮರುಬಳಕೆ ಇಂಧನ ಉತ್ಪಾದನೆಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಹತ್ತು ವರ್ಷದಲ್ಲಿ ಉತ್ಪಾದನಾ ಸಾಮರ್ಥ್ಯ ಶೇ. 400ರಷ್ಟು ಹೆಚ್ಚಾಗಿದೆ.
  • ಹತ್ತು ವರ್ಷದ ಹಿಂದೆ ಅಸ್ತಿತ್ವದಲ್ಲಿಲ್ಲದ ಇವಿ ಉದ್ಯಮ ಈಗ 3 ಬಿಲಿಯನ್ ಡಾಲರ್ ಗಾತ್ರದ್ದಾಗಿದೆ.
  • ರಕ್ಷಣಾ ವಸ್ತುಗಳ ರಫ್ತು 1,000 ಕೋಟಿ ರೂ ಇದ್ದದ್ದು 21,000 ಕೋಟಿ ರೂಗೆ ಏರಿದೆ.
  • ಆಟಿಕೆ ಉದ್ಯಮದಿಂದ ರಫ್ತು ಪ್ರಮಾಣ ಶೇ. 239ರಷ್ಟು ಹೆಚ್ಚಾಗಿದೆ. ಆಮದು ಸಾಕಷ್ಟು ಕಡಿಮೆ ಆಗಿದೆ.
  • ಭಾರತದ ಇವತ್ತಿನ ಐಕಾನಿಕ್ ಉತ್ಪನ್ನಗಳೆನ್ನಲಾಗುವ ವಂದೇ ಭಾರ್ ರೈಲು, ಬ್ರಹ್ಮೋಸ್ ಕ್ಷಿಪಣಿ ಮೊದಲಾದವುಗಳು ಮೇಕ್ ಇನ್ ಇಂಡಿಯಾ ಪ್ರಾಡಕ್ಟ್​ಗಳೇ ಆಗಿವೆ.
  • ಸರ್ಕಾರ ಜಾರಿಗೆ ತಂದಿರುವ ಪಿಎಲ್​ಐ ಸ್ಕೀಮ್​ಗಳು ಭಾರತದ ಮ್ಯಾನುಫ್ಯಾಕ್ಚರಿಂಗ್ ವಲಯದಲ್ಲಿ ಗೇಮ್ ಚೇಂಜರ್ ಎನಿಸಿವೆ. ಸಾವಿರಾರು ಕೋಟಿ ರೂ ಹೂಡಿಕೆ, ಲಕ್ಷಾಂತರ ಉದ್ಯೋಗ ಸೃಷ್ಟಿಗೆ ಕಾರಣವಾಗಿವೆ.
  • 4.9 ಕೋಟಿಗೂ ಹೆಚ್ಚು ಎಂಎಸ್​ಎಂಇಗಳು ಉದ್ಯಮ್ ಪೋರ್ಟಲ್​ನಲ್ಲಿ ನೊಂದಾವಣಿ ಮಾಡಿವೆ. ಇವು 21 ಕೋಟಿ ಉದ್ಯೋಗಗಳನ್ನು ಸೃಷ್ಟಿಸಿವೆ.
  • ಅತಿದೊಡ್ಡ ತಂತ್ರಜ್ಞಾನ ಶಕ್ತ ಸ್ಟಾರ್ಟಪ್ ಇಕೋಸಿಸ್ಟಂ ಹೊಂದಿರುವ ದೇಶಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ
  • 2014ರಿಂದ ಒಂದು ಕೋಟಿಗೂ ಹೆಚ್ಚು ಪೇಟೆಂಟ್​ಗಳನ್ನು ನೀಡಲಾಗಿದೆ.

Post a comment

No Reviews