
ಬೆಳಗಾವಿ: ಗಾಳಿ ಮಳೆಯಿಂದಾಗಿ ಮರವೊಂದು ಹೋರಿಯ ಮೇಲೆ ಬಿದ್ದು ಹೋರಿ ಮೃತಪಟ್ಟಿರುವ ಘಟನೆ ಬೆಳಗಾವಿಯ ಹುಳಸಾಲದಲ್ಲಿ ನಡೆದಿದೆ. ಮೇ 23 ರಂದು ಶಂಕರ ರೊಡ್ಡಣ್ಣ ಎಂಬುವವರು ತಮ್ಮ ಹೋರಿಯನ್ನು ಮೇಯಲು ಜಮೀನಿನಲ್ಲಿ ಕಟ್ಟಿದ್ದರು. ಸಂಜೆ 5:30 ಸುಮಾರಿಗೆ ಗಾಳಿ ಸಹಿತ ಮಳೆ ಸುರಿದಿದೆ. ಆ ವೇಳೆ ಮರವೊಂದು ಬುಡ ಸಮೇತ ಬಿದ್ದು ಈ ದುರ್ಘಟನೆ ಸಂಭವಿಸಿದೆ. ಅಷ್ಟೇ ಅಲ್ಲದೆ ಕೆಲವು ಮರಗಳು ವಿದ್ಯುತ್ ಕಂಬದ ಮೇಲೂ ಬಿದ್ದು ಗ್ರಾಮದಲ್ಲಿ ಜನರು ಕರೆಂಟ್ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
Poll (Public Option)

Post a comment
Log in to write reviews