
ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಆಧ್ಯಾತ್ಮಿಕ ನಾಯಕ ಸದ್ಗುರುವಿನ ಆಶ್ರಮವನ್ನು ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು “ಬ್ರೈನ್ ವಾಶ್” ಮಾಡಲಾಗಿದೆ ಎಂದು ವ್ಯಕ್ತಿಯೊಬ್ಬರ ಹೇಳಿಕೆಗೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್‌ನಲ್ಲಿರುವ ಇಶಾ ಫೌಂಡೇಶನ್ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಸುಪ್ರೀಂಕೋರ್ಟ್ ಇಂದು ರದ್ದುಗೊಳಿಸಿದೆ.
ಗೀತಾ ಮತ್ತು ಲತಾ ಇಬ್ಬರೂ ವಯಸ್ಕರಾಗಿದ್ದು, ಅವರ ಸ್ವಂತ ಇಚ್ಛೆಯ ಆಶ್ರಮದಲ್ಲಿ ವಾಸಿಸುತ್ತಿರುವ ಕಾರಣ ಕಾನೂನುಬಾಹಿರ ಬಂಧನದ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ತೀರ್ಪು ನೀಡಿದೆ.
ಇನ್ನೂ ಈ ಆದೇಶವು ಈ ಪ್ರಕರಣಕ್ಕೆ ಮಾತ್ರ. ಆಶ್ರಮದಲ್ಲಿ ವೈದ್ಯರೊಬ್ಬರ ಮೇಲೆ ಇತ್ತೀಚೆಗೆ ಮಕ್ಕಳ ಮೇಲಿನ ದೌರ್ಜನ್ಯದ ಆರೋಪವಿದೆ ಎಂದು ನ್ಯಾಯಾಲಯವು ಹೇಳಿದೆ. ಬ್ರೈನ್ ವಾಶ್ ವಿಷಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯ ತನಿಖೆಗೆ ಆದೇಶಿಸಿದ ಮದ್ರಾಸ್ ಹೈಕೋರ್ಟ್, ಸಂಪೂರ್ಣವಾಗಿ ಅನುಚಿತ ರೀತಿಯಲ್ಲಿ ವರ್ತಿಸಿದೆ ಎಂದಿದೆ. ಇನ್ನೂ ಆಶ್ರಮಕ್ಕೆ ಸೇರಿದಾಗ ಅವರಿಬ್ಬರಿಗೂ 27 ಮತ್ತು 24 ವರ್ಷ. ಹೆಣ್ಣುಮಕ್ಕಳಿಬ್ಬರೂ ಅಪ್ರಾಪ್ತ ವಯಸ್ಸಿನವರಾಗಿರಲಿಲ್ಲ. ಮುಂದೆ ಯಾವುದೇ ನಿರ್ದೇಶನಗಳ ಅಗತ್ಯವಿಲ್ಲ ಎಂದು ಎಂದು ಸುಪ್ರೀಂಕೋರ್ಟ್ ಹೇಳಿದೆ.
Poll (Public Option)

Post a comment
Log in to write reviews