
ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ವಿರುದ್ಧದ ಪ್ರಕರಣ ಈಗ ಮತ್ತೊಂದು ಹಂತ ತಲುಪಿದೆ. ಸಂತ್ರಸ್ತೆ ಹಾಗೂ ಸಂತ್ರಸ್ತೆಯ ವಿರುದ್ಧ ಕುಲಕರ್ಣಿ ನೀಡಿರುವ ದೂರುಗಳ ವಿಚಾರಣೆಯ ಹಾಗೂ ತನಿಖೆಯ ಹೊಣೆಯನ್ನು ರಾಜ್ಯ ಸರ್ಕಾರ ಶುಕ್ರವಾರ ಸಿಐಡಿಗೆ ಹಸ್ತಾಂತರ ಮಾಡಿದೆ.
ಶಾಸಕ ವಿನಯ್ ಕುಲಕರ್ಣಿ ವಿರುದ್ಧ ರೈತ ಮಹಿಳೆ ದೂರು ನೀಡಿದ್ದರು. ವಿನಯ್ ಕುಲಕರ್ಣಿ ವಿರುದ್ಧ ಜೀವ ಬೆದರಿಕೆ, ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಾಗಿತ್ತು. ಬೆಂಗಳೂರಿನಲ್ಲಿ ವಿನಯ್ ಕುಲಕರ್ಣಿ ಅತ್ಯಾಚಾರವೆಸಗಿದ್ದರೆಂದು ಹಾವೇರಿಯ ಮಹಿಳೆ ಸಂಜಯ್ ನಗರ ಠಾಣೆಗೆ ದೂರು ನೀಡಿದ್ದರು. ಸಂತ್ರಸ್ತ ಮಹಿಳೆ ದೂರಿಗೆ ಪ್ರತಿದೂರು ದಾಲಿಸಿದ್ದ ವಿನಯ್ ಕುಲಕರ್ಣಿ, 2 ಕೋಟಿ ರೂಪಾಯಿ ನೀಡುವಂತೆ ರೈತ ಮಹಿಳೆ ಬ್ಲ್ಯಾಕ್‌ಮೇಲ್ ಮಾಡಿದ್ದರು ಎಂದು ಆರೋಪಿಸಿದ್ದರು.
ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ಸ್ಥಳ ಮಹಜರು ನಡೆಸಿದ್ದಾರೆ. ಸಂತ್ರಸ್ತೆಯಿಂದ ಪ್ರಾಥಮಿಕ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಹಿನ್ನೆಲೆ ವಿನಯ್ ಕುಲಕರ್ಣಿ ಅತ್ಯಾಚಾರ ಎಸಗಿದ್ದಲ್ಲದೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ರೈತ ಮಹಿಳೆ ಮಾಡಿದ ಆರೋಪದ ಮೇಲೆ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಬುಧವಾರ ಎಫ್‌ಐಆರ್ ದಾಖಲಾಗಿತ್ತು. ಇದರ ಬೆನ್ನಲ್ಲೇ, ಅತ್ಯಾಚಾರ ಪ್ರಕರಣ ದಾಖಲಿಸಿದ ಮಹಿಳೆ ವಿರುದ್ಧವೇ ವಿನಯ್ ಕುಲಕರ್ಣಿ ಪ್ರತಿದೂರು ದಾಖಲಿಸಿದ್ದರು.
Poll (Public Option)

Post a comment
Log in to write reviews