
ಮೇ 06 ಸಂಜೆ ಗಾಳಿ ಸಹಿತ ಮಳೆಯಿಂದಾಗಿ ಆರ್ ಟಿ ನಗರದ ಮಾಜಿ ಸಿಎಂ ಬಿಎಸ್ ಬೊಮ್ಮಾಯಿ ಮನೆ ಮುಂದೆ ಬೃಹತ್ ಗಾತ್ರದ ಮರಗಳು ಧರೆಗುರುಳಿವೆ.ಇದಕ್ಕೆ ಬಿಬಿಎಂಪಿ ಮತ್ತು ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಜನರು ಹೇಳ್ತಾ ಇದ್ದಾರೆ.
ಈ ಹಿಂದೆಯಷ್ಟೇ ರವೀಂದ್ರನಾಥ ಠಾಗೋರ್ ವೃತ್ತದ ಬಳಿ ಮರವೊಂದು ನೆಲಕ್ಕುರುಳಿತ್ತು.ನಮ್ಮ ಸಮಯ ನ್ಯೂಸ್ ರಸ್ತೆ ಬದಿಯಲ್ಲಿರುವ ಮರಗಳ ತೆರವುಗೊಳಿಸುವ ಬಗ್ಗೆ ಸುದ್ದಿಯನ್ನು ಸಹ ಮಾಡಿತ್ತು. ಆದರೆ ಈಗ ಅಂತಹದ್ದೇ ಘಟನೆ ಮರುಕಳಿಸಿದೆ.
ಲಕ್ಷಾಂತರ ಮೌಲ್ಯದ ಕಾರುಗಳು ಜಖಂ
ನಿನ್ನೆ ಸಂಜೆ ಸುರಿದ ಗಾಳಿ ಸಹಿತ ಮಳೆಗೆ ಮರ ಬಿದ್ದು ರಸ್ತೆ ಬದಿ ನಿಲ್ಲಿಸಿದ ಲಕ್ಷಾಂತರ ರೂ. ಮೌಲ್ಯದ ಕಾರುಗಳು ನುಜ್ಜುಗುಜ್ಜಾಗಿವೆ. ಈ ಮಳೆಗೆ ಹಲವಾರು ಮರಗಳು ನೆಲಕುರುಳಿದ್ದು, ಒಂದೆರಡು ಮರಗಳು ಎಕ್ಸ್ ಯು ವಿ 700 ಮತ್ತು ಇನ್ನೋವಾ ಕಾರುಗಳ ಮೇಲೆ ಬಿದ್ದಿದೆ ಇದರಿಂದಾಗಿ ಕಾರುಗಳು ಸಂಪೂರ್ಣ ನುಚ್ಚುಗುಜ್ಜಾಗಿದೆ.
ರಸ್ತೆಗೆ ಮರ ಬಿದ್ದ ಪರಿಣಾಮ ಸ್ವಲ್ಪ ಸಮಯದವರೆಗೆ ಟ್ರಾಫಿಕ್ ಜಾಮ್ ಉಂಟಾಗಿದ್ದು. ವಾಹನ ಸವಾರರು ಸ್ಥಳದಲ್ಲಿ ಕೆಲಕಾಲ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
Tags:
Poll (Public Option)

Post a comment
Log in to write reviews