
ಕಾರು ಡಿವೈಡರ್ ಗೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರು ಗಂಭೀರ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕಡ್ಲೂರು ಗೇಟ್ ಬಳಿ ನಡೆದಿದೆ.
ಘಟನೆಯಲ್ಲಿ ತುಮಕೂರಿನ ಗುಬ್ಬಿ ನಗರದ 2 ವರ್ಷದ ಮಗು ಹಾಗೂ ವಿಕ್ರಾಂತ್(36) ಮೃತ ಪಟ್ಟಿರುವ ದುರ್ದೈವಿಗಳು. ಐವರು ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಟುಂಬದವರು ಮುರುಡೇಶ್ವರ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದ್ದು, ಈ ಮಾರ್ಗದಲ್ಲಿ ರಸ್ತೆ ಕೆಲಸ ಚಾಲ್ತಿಯಲ್ಲಿತ್ತು. ಹೀಗಾಗಿ ಮುಖ್ಯ ರಸ್ತೆ ಬಂದ್ ಮಾಡಿದ್ದರಿಂದ ಬೈಪಾಸ್ ಅಲ್ಲಿ ತಿರುವು ಪಡೆಯಲು ಹೋಗಿ ಈ ದುರ್ಘಟನೆ ಸಂಭವಿಸಿದೆ.
Poll (Public Option)

Post a comment
Log in to write reviews