ಟಾಪ್ 10 ನ್ಯೂಸ್
ಮೈಸೂರು ಅರಮನೆ ಗನ್ ಹೌಸ್ ವೃತ್ತದಲ್ಲಿ ಕ್ಯಾಂಟರ್ ಗಾಡಿ ಪಲ್ಟಿ; ಪ್ರಾಣಾಪಾಯದಿಂದ ಪಾರು

ಮೈಸೂರು: ಮೈಸೂರು ಅರಮನೆ ಗನ್ ಹೌಸ್ ವೃತ್ತದಲ್ಲಿ ಕ್ಯಾಂಟರ್ ಗಾಡಿ ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಯಾರಿಗೂ ಹಾನಿಯಾಗಿಲ್ಲ.
ಕ್ಯಾಂಟರ್ ವಾಹನ ಪಲ್ಟಿ ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದ ಭಾಸ್ಕರ್ ಎಂಬುವವರಿಗೆ ಸೇರಿದೆ. ಕಲ್ನಾರ್ ಶೀಟು ಸಾಗಿಸುತ್ತಿದ್ದ ವೇಳೆ ಗನ್ ಹೌಸ್ ವೃತ್ತದ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೃಷ್ಣರಾಜ ಸಂಚಾರ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.
Poll (Public Option)

Post a comment
Log in to write reviews