2024-09-19 04:31:33

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

10 ಲಕ್ಷ ಮೌಲ್ಯದ ಗಾಂಜಾ ವಶ: ಮೂವರು ಬಂಧನ

ದಾವಣಗೆರೆ: ಒಡಿಶಾ ರಾಜ್ಯದಿಂದ ಹರಿಹರಕ್ಕೆ ಗಾಂಜಾ ಸಾಗಾಟ ಮಾಡಿ ಮಾರಾಟಕ್ಕಾಗಿ ದಾಸ್ತಾನು ಮಾಡಿದ್ದ ಸ್ಥಳದ ಮೇಲೆ ಹರಿಹರ ಪೊಲೀಸರು ದಾಳಿ ನಡೆಸಿ 10 ಲಕ್ಷ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡು ಮೂರು ಆರೋಪಿಗಳನ್ನು ಬಂಧಿಸಿದ್ದಾರೆ.
ಹರಿಹರ ನಗರದಲ್ಲಿ ಮಾದಕ ವಸ್ತುಗಳ ಸೇವನೆ ಮಾಡುವವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಪೊಲೀಸರು, ಈ ಸಂದರ್ಭದಲ್ಲಿ ಮಾದಕ ವ್ಯಸನಿಗಳಿಗೆ ಸಿಗುತ್ತಿದ್ದ ಗಾಂಜಾದ ಮೂಲವನ್ನು ಬೆನ್ನು ಹತ್ತಿದ್ದರು. ಒಡಿಶಾ ರಾಜ್ಯದಿಂದ ಹರಿಹರಕ್ಕೆ ಗಾಂಜಾ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು, ಹರಿಹರ ನಗರದ ಇಂಡಸ್ಟ್ರಿಯಲ್ ಏರಿಯಾದಲ್ಲಿ ದಾಸ್ತಾನು ಮಾಡಿದ ಸ್ಥಳದ ಮೇಲೆ ದಾಳಿ ನಡೆಸಿದ್ದಾರೆ.
ಒಡಿಶಾ ರಾಜ್ಯ ಮೂಲದ ಕೇಸಬಾ ಮೊಹಂತಿ (24), ಸುಮಂತ ಸಾಹು(25) ಹಾಗೂ ಹರಿಹರದ ಸೈಯದ್ ಸಾದಿಕ್ (27) ಮೂವರು ಆರೋಪಿಗಳನ್ನು ವಶಕ್ಕೆ ಪಡೆದು, ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ 10 ಲಕ್ಷ ರೂಪಾಯಿ ಮೌಲ್ಯದ 10 ಕೆ.ಜಿ. ಗಾಂಜಾವನ್ನು ಹಾಗೂ ಒಂದು ಬೈಕ್​ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಇಬ್ಬರು ಆರೋಪಿಗಳು ಒಡಿಶಾ ರಾಜ್ಯದ ಮೂಲದವರಾಗಿದ್ದು, ಇವರಿಬ್ಬರು ಹರಿಹರ ರೈಲ್ವೆ ನಿಲ್ಧಾಣದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರೈಲ್ವೆ ಹಳಿ ಕಾಮಗಾರಿಯ ಕಾಂಕ್ರಿಟ್ ಕೆಲಸ ಮಾಡಲು ಬಂದಿದ್ದರು. 10 ಕೆಜಿ ಗಾಂಜಾವನ್ನು ಒಡಿಶಾ ರಾಜ್ಯದಿಂದ ತಂದು ಹರಿಹರದಲ್ಲಿ ಮರಾಟ ಮಾಡುತ್ತಿದ್ದರು ಎಂದು ಪೊಲೀಸರು ತನಿಖೆ ವೇಳೆ ತಿಳಿದು ಬಂದಿದೆ. 

Post a comment

No Reviews