2024-12-24 06:26:17

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಕೇಕ್‌ನಲ್ಲೂ ಕ್ಯಾನ್ಸರ್ ಕಾರಕ ಅಂಶ ಪತ್ತೆ!

ಬೆಂಗಳೂರು: ಗೋಬಿ, ಕಬಾಬ್ ಬಳಸುವ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿವೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ತಿಳಿಸಿತ್ತು. ಇದೀಗ, ಕೇಕ್‌ಗೆ(Cake) ಬಳಸುವ ಪದಾರ್ಥಗಳಲ್ಲೂ ಕ್ಯಾನ್ಸರ್‌ಕಾರಕ ಅಂಶ ಪತ್ತೆಯಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ತಿಳಿಸಿದೆ.

ಕೇಕ್‌ಗೆ ಬಳಸುವ ಪದಾರ್ಥಗಳು ಕಲಬರಿಕೆಯಿಂದ ಕೂಡಿವೆ ಎಂಬ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಕೇಕ್ ಮಾದರಿಗಳನ್ನು ಸಂಗ್ರಹಿಸಿದರು. ಪರಿಶೀಲನೆಗೆ ಒಳಪಡಿಸಿದಾಗ 12 ಮಾದರಿ ಕೇಕ್‌ಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿವೆ. ವಿಶೇಷವಾಗಿ ರೆಡ್ ವೆಲ್ವೆಟ್ ಹಾಗೂ ಬ್ಲಾಕ್ ಫಾರೆಸ್ಟ್ ಕೇಕ್‌ನಲ್ಲಿ ಹೆಚ್ಚು ಬಣ್ಣ ಬಳಕೆ ಮಾಡುವುದರಿಂದ, ಇದು ಮನುಷ್ಯನ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಹಾಗೂ, 12 ಮಾದರಿಗಳಲ್ಲಿ ಅಲೂನಾ ರೆಡ್, ಸನ್ ಸೆಟ್ ಯೆಲ್ಲೋ, ಪೊನುಸೆಯಾ 4R , ಕಾರ್ಮಿಯೋಸೆನ್ ಎಂಬ ಅಂಶ ಪತ್ತೆಯಾಗಿದೆ.  ಹೀಗಾಗಿ ರೆಡ್ ವೆಲ್ವೆಟ್ ಹಾಗೂ ಬ್ಲಾಕ್ ಫಾರೆಸ್ಟ್ ಕೇಕ್‌ಗೆ ಬಣ್ಣ ಬಳಕೆಗೆ ನಿರ್ಬಂಧಿಸಲಾಗಿದೆ. ಆಹಾರ ಸುರಕ್ಷತಾ ಇಲಾಖೆಯ ಸೂಚನೆ ಪಾಲಿಸುವಂತೆ ಕೇಕ್ ತಯಾರಿಕರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Post a comment

No Reviews