
ಗುಜರಾತ್ : ಬಸ್ ಅಪಘಾತದಲ್ಲಿ 6 ಮಂದಿ ಮೃತಟ್ಟಿದ್ದು ಹಲವರು ಗಾಯಗೊಂಡಿರುವ ಘಟನೆ ಗುಜರಾತ್ ನ ಆನಂದ್ ಬಳಿ ನಡೆದಿದೆ.
ಅಹಮದಾಬಾದ್ ವಡೋದರಾ ಎಕ್ಸ್ ಪ್ರಸ್ ಹೆದ್ದಾರಿಯಲ್ಲಿ ಮಂಗಳಾವಾರ ಬೆಳಿಗ್ಗೆ 4.30 ರ ಸಮಯದಲ್ಲಿ ಬಸ್ ಗೆ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 3 ಜನ ಸಾವನ್ನಪ್ಪಿದ್ದಾರೆ ಇನ್ನು ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಗಾಯ ಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ
ಬಸ್ ಮಹಾರಾಷ್ಟ್ರದಿಂದ ರಾಜಸ್ಥಾನಕ್ಕೆ ಹೋಗುತ್ತಿತ್ತು. ಆನಂದ್ ಬಳಿ ಬಸ್ ಪಂಕ್ಚರ್ ಆಗಿತ್ತು. ಇದರಿಂದಾಗಿ ಬಸ್ಸಿನ ಚಾಲಕ ಹಾಗೂ ಪ್ರಯಾಣಿಕರು ಬಸ್ಸಿನ ಕೆಳಗೆ ನಿಂತಿದ್ದರು. ಆಗ ಹಿಂದಿನಿಂದ ಲಾರಿಯೊಂದು ಬಸ್‌ಗೆ ಡಿಕ್ಕಿ ಹೊಡೆದಿದೆ. ರಸ್ತೆ ಅಪಘಾತದ ಸುದ್ದಿ ತಿಳಿದ ತಕ್ಷಣ ಆನಂದ ಅಗ್ನಿಶಾಮಕ ದಳ, ಎಕ್ಸ್ ಪ್ರೆಸ್ ಹೈವೇ ಪೆಟ್ರೋಲಿಂಗ್ ತಂಡ ಹಾಗು ಆನಂದ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕಾರಣ ದಾಖಾಲಿಸಲಾಗಿದೆ.
Poll (Public Option)

Post a comment
Log in to write reviews