
ಶ್ರೀನಗರ: ಚೌಕಿ ಚಾರಾ ಪ್ರಾಂತ್ಯದ ತುಂಗಿ-ಮೊಹ್ರಾ ಬಳಿ ಬಸ್ ಕಣಿವೆಗೆ ಬಿದ್ದು 21 ಮಂದಿ ಮೃತಪಟ್ಟಿದ್ದಾರೆ.
ಹರಿಯಾಣದ ಕುರುಕ್ಷೇತ್ರದಿಂದ ಹೊರಟ ಬಸ್ ಜಮ್ಮುವಿನ ವಿವಿಧ ದೇವಾಲಯಗಳ ಭೇಟಿಗೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ಕಣಿವೆಗೆ ಬಿದ್ದಿದೆ. ಗಾಯಗೊಂಡಿರುವ 47 ಜನರನ್ನು ಜಮ್ಮುವಿನಲ್ಲಿರುವ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಮ್ಮುವಿನ ಪೌಂಜ್ ಪ್ರದೇಶದಲ್ಲಿರುವ ಶಿವ ಖೋರಿ ಕಡೆ ಹೊರಟಿದ್ದ ಬಸ್ 150 ಅಡಿ ಆಳದ ಕಣಿವೆಗೆ ಉರುಳಿದೆ. ಪ್ರಧಾನಿ ಪರಿಹಾರ ನಿಧಿಯಿಂದ ಸಂತ್ರಸ್ತ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ.
Poll (Public Option)

Post a comment
Log in to write reviews