2024-12-24 05:38:55

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಬೂಮ್ರಾ ಅಟ್ಯಾಕ್‌,ಬಾಂಗ್ಲಾ ಬ್ಯಾಟರ್ಸ್‌ ಲಾಕ್‌..!

ಚೆನ್ನೈ: ಚೆಪಾಕ್ ಮೈದಾನದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ಎರಡನೇ ದಿನದ ಟೆಸ್ಟ್ ಪಂದ್ಯದಲ್ಲಿ ಬೂಮ್ರಾ ಬೌಲಿಂಗ್‌ ದಾಳಿಗೆ ತತ್ತರಿಸಿದ ಬಾಂಗ್ಲಾದೇಶದ ಬ್ಯಾಟ್ಸ್​ಮನ್‌ಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇಂದು ಬೆಳಗ್ಗೆ ಪ್ರಾರಂಭವಾದ ಎರಡನೇ ದಿನದ ಪಂದ್ಯದಲ್ಲಿ ಭಾರತವು ಜಡೇಜಾ ಹಾಗೂ ಅಶ್ವಿನ್ ಅವರ ವಿಕೆಟ್ ಕಳೆದುಕೊಂಡು ಬೇಗ ಆಲೌಟ್ ಆಯಿತು. 91.2 ಓವರ್​ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 376 ರನ್​​ಗಳಿಸಿತು. ಈ ಗುರಿ ಬೆನ್ನತ್ತಿ ಬ್ಯಾಟಿಂಗ್​ ಅಖಾಡಕ್ಕೆಇಳಿದ ಬಾಂಗ್ಲಾ ತಂಡ ಟೀ ಬ್ರೇಕ್ ಅಂತ್ಯದ ವೇಳೆಗೆ 112 ರನ್​ಗಳಿಸಿ 8 ವಿಕೆಟ್ ಕಳೆದುಕೊಂಡು ಪೇಚಿಗೆ ಸಿಲುಕಿದೆ.

ಟೀಂ ಇಂಡಿಯಾ ಪರ ಜಸ್​​ಪ್ರೀತ್ ಬೂಮ್ರಾರ ಮಾರಕ ಬೌಲಿಂಗ್ ದಾಳಿ ಹೇಗಿತ್ತು ಅಂದರೆ, ಕೇವಲ 6.5 ಓವರ್​ನಲ್ಲಿ 28 ರನ್​​ ನೀಡಿ 3 ಮೂರು ವಿಕೆಟ್ ಪಡೆದುಕೊಂಡರು. ಬ್ಯಾಟಿಂಗ್​ನಲ್ಲಿ ದರ್ಬಾರ್ ನಡೆಸಿದ್ದ ರವೀಂದ್ರ ಜಡೆಜಾ 2 ವಿಕೆಟ್​ ಪಡೆದರು. ಅದೇ ರೀತಿ ಆಕಾಶ್ ದೀಪ್ ಎರಡು ವಿಕೆಟ್ ಪಡೆದರೆ, ಸಿರಾಜ್ ಕೂಡ ಒಂದು ವಿಕೆಟ್ ಪಡೆದುಕೊಂಡಿದ್ದಾರೆ. ಇನ್ನು ಎರಡು ವಿಕೆಟ್ ಉರುಳಿದರೆ ರೋಹಿತ್ ಪಡೆ ಮೊದಲ ಇನ್ನಿಂಗ್ಸ್​ನಲ್ಲಿ ಭಾರೀ ಅಂತರದ ಮುನ್ನಡೆ ಕಾಯ್ದುಕೊಳ್ಳಲಿದೆ.

Post a comment

No Reviews