2024-11-08 12:31:18

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ನಾಡ ಹಬ್ಬ ದಸರಾ ಪ್ರಯುಕ್ತ ಶಿಕ್ಷಣ ಇಲಾಖೆ ಅಕ್ಟೋಬರ್​ 3ರಿಂದ 20ರ ತನಕ ಒಟ್ಟು 17 ದಿನಗಳ ಕಾಲ ಶಾಲೆಗಳಿಗೆ ರಜೆ ಘೋಷಿಸಿದೆ.

ಬೆಂಗಳೂರು:ನಾಡಹಬ್ಬದಸರಾಪ್ರಯುಕ್ತಶಿಕ್ಷಣ ಇಲಾಖೆಅಕ್ಟೋಬರ್​ 3ರಿಂದ 20ರ ತನಕ ಒಟ್ಟು 17 ದಿನಗಳ ಕಾಲ ಶಾಲೆಗಳಿಗೆ ರಜೆ ಘೋಷಿಸಿದೆ.ಅಕ್ಟೋಬ‌ರ್ 21 ರಿಂದ ಶೈಕ್ಷಣಿಕ ಸಾಲಿನ 2ನೇ ಅವಧಿಯು ಪ್ರಾರಂಭವಾಗಲಿದ್ದು, 2025ರ ಏಪ್ರಿಲ್ 10 ತನಕ ಶಾಲೆ ನಡೆಯಲಿದೆಎಂದುತಿಳಿಸಿದೆ.

ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳು ಹಾಗೂ ಖಾಸಗಿ ಶಾಲೆಗಳಿಗೆ ಈ ರಜೆ ಅನ್ವಯವಾಗಲಿದೆ. ನಾಳೆಯಿಂದ ಎಸ್ಎಸ್ಎಲ್​​ಸಿ ಅರ್ಧ ವಾರ್ಷಿಕ ಪರೀಕ್ಷೆ ಆರಂಭಗೊಳ್ಳಲಿದ್ದು ಅಕ್ಟೋಬರ್‌.1 ಕ್ಕೆ ಮುಕ್ತಾಯವಾಗಲಿದೆ. ಅ.2 ಗಾಂಧಿ ಜಯಂತಿ ಮುಗಿಯುತ್ತಿದ್ದಂತೆ ದಸರಾ ರಜೆ ಆರಂಭಗೊಳ್ಳಲಿದೆ.

ಮಂಗಳೂರಿನಲ್ಲೂ ಇದೇ ದಿನಾಂಕಗಳಂದು ರಜೆ ನೀಡಲಾಗಿದೆ. ಈ ಹಿಂದೆ ಮಂಗಳೂರು, ಉಡುಪಿ ಪ್ರಾಂತ್ಯದಲ್ಲಿ ವಿದ್ಯಾರ್ಥಿಗಳ ದಸರಾ ರಜೆಯಲ್ಲಿ ಸ್ವಲ್ಪ ಮಾರ್ಪಾಡು ಆಗುತ್ತಿತ್ತು. ಉಳಿದೆಡೆಗೆ ಕೊಡಲಾಗುವ ರಜೆಗೆ ಹೋಲಿಸಿದರೆ ಮಂಗಳೂರಿನಲ್ಲಿ ದಸರಾ ರಜೆ ವ್ಯತ್ಯಾಸವಾಗುತ್ತಿತ್ತು. ಆದರೆ, ಈ ಬಾರಿ ಅಂತಹ ಯಾವುದೇ ಬದಲಾವಣೆ ಆಗಿಲ್ಲ. ಕರ್ನಾಟಕದ ಎಲ್ಲಾ ಶಾಲೆಗಳಿಗೆ ಒಂದೇ ರೀತಿ, ಒಂದೇ ಅವಧಿಯ ರಜೆಯನ್ನು ನೀಡಲಾಗಿದೆ.

ಸಿಬಿಎಸ್​ಇ ಹಾಗೂ ಐಸಿಎಸ್​ಇ ಶಾಲೆಗಳಿಗೆ ಈ ರಜೆಗಳು ಅನ್ವಯವಾಗುವುದಿಲ್ಲ. ಅವು ಕೇಂದ್ರ ಪಠ್ಯಕ್ರಮದಡಿ ಕಾರ್ಯನಿರ್ವಹಿಸುವುದರಿಂದ ಆ ಶಾಲೆಗಳ ರಜೆಯ ದಿನಾಂಕ ಹಾಗೂ ರಜೆಯ ಅವಧಿ ಬೇರೆಯಾಗಿರುತ್ತದೆಎಂದುತಿಳಿಸಿದೆ.

Post a comment

No Reviews