ಕೇಂದ್ರ ಸರ್ಕಾರದಲ್ಲಿ ರಾಜ್ಯಕ್ಕೆ ಬಂಪರ್ : ಮತ್ತೊಮ್ಮೆ ಶೋಭಾ ಕರಂದ್ಲಾಜೆ ಸಚಿವೆ

ಬೆಂಗಳೂರು: ಕೇಂದ್ರ ಸಚಿವ ಸಂಪುಟದಲ್ಲಿ ಕರ್ನಾಟಕಕ್ಕೆ ನಾಲ್ಕು ಸಚಿವ ಸ್ಥಾನ ಸಿಕ್ಕುವ ಸಂಭವವಿದ್ದು, ಶೋಭಾ ಕಂದ್ಲಾಜೆ ಅವರಿಗೆ ಮತ್ತೊಮ್ಮೆ ಮಂತ್ರಿಗಿರಿ ಧಕ್ಕಲಿದೆ ಎನ್ನಲಾಗಿದೆ.
ಹಿಂದಿನ ಮೋದಿ ನೇತೃತ್ವದ ಸರ್ಕಾರದಲ್ಲಿ ಶೋಭಾ ಕರಂದ್ಲಾಜೆ ಅವರು ರಾಜ್ಯ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವಾಲಯದಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದರು. ಈಗ ಪ್ರಸ್ತುತ ಎನ್‌ಡಿಎ ಸರ್ಕಾರದಲ್ಲೂ ಕೂಡ ಸಚಿವರಾಗಿ ಮುಂದುವರೆಯಲಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಶೋಭಾ ಕರಂದ್ಲಾಜೆಯವರಿಗೆ ಪ್ರಮಾಣವಚನಕ್ಕೆ ಸಿದ್ದರಾಗಿರುವಂತೆ ಪ್ರಧಾನಿ ಕಚೇರಿಯಿಂದ ದೂರವಾಣಿ ಮೂಲಕ ಮಾಹಿತಿ ರವಾನೆಯಾಗಿದ್ದು, ಸಚಿವರಾಗುವ ಸಾಧ್ಯತೆ ಹೆಚ್ಚಿದೆ.
ರಾಜ್ಯದಿಂದ ಎಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ ಅವರ ಹೆಸರು ಕೂಡ ಪ್ರಸ್ತಾಪದಲ್ಲಿದ್ದು, ಇವರಲ್ಲಿಇಬ್ಬರಿಗೆ ಅವಕಾಶ ಸಿಗಲಿದೆ. ಇದಲ್ಲದೆ ಬೆಂಗಳೂರು ಗ್ರಾಮಾಂತರದಿಂದ ಆಯ್ಕೆಯಾಗಿರುವ ಡಾ.ಮಂಜುನಾಥ್ ಅವರಿಗೂ ಸಚಿವರಾಗುವ ಅವಕಾಶವಿದೆ. ಹೀಗಿದ್ದರೂ ಕೇಂದ್ರದಲ್ಲೀಗ ಎನ್‌ಡಿಎ ಸರ್ಕಾರವಿರುವುದರಿಂದ ಎಲ್ಲ ಪಕ್ಷಗಳಿಗೂ ಸಮಾನವಾದ ಅವಕಾಶ ನೀಡಬೇಕಿದೆ. ಹೀಗಾಗಿ ಕೊನೆಯ ಹಂತದ ಬದಲಾವಣೆಗಳಾದರೂ ಕರ್ನಾಟಕಕ್ಕೆ ಕನಿಷ್ಟ ನಾಲ್ಕು ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ.
Poll (Public Option)

Post a comment
Log in to write reviews