2024-12-24 07:15:44

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

BSNL 5G ಸಿಮ್‌ ಕಾರ್ಡ್‌ಗಳು ಶೀಘ್ರದಲ್ಲಿ ?

ಬೆಂಗಳೂರು : ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿರುವ ಬಿಎಸ್​​ಎನ್​ಎಲ್ 5ಜಿ ನೆಟ್ವರ್ಕ್​ಗೆ (BSNL 5G Service) ಪ್ರವೇಶ ಪಡೆದಿದೆ.

ಬಿಎಸ್​ಎನ್​​ಎಲ್ ಈ ಸೇವೆಯ ಟ್ರಯಲ್​ ರನ್​ ಮಾಡುತ್ತಿದ್ದು ಬಹುತೇಕ ಯಶಸ್ವಿಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಅದು ಗ್ರಾಹಕರಿಗೆ ಲಭ್ಯವಾಗಲಿದೆ. ಬಿಎಸ್​ಎನ್​ಎಲ್​ ಕಚೇರಿಗಳಿಗೆ 5ಜಿ ಸಿಮ್​ಗಳು ಇದಾಗಲೇ ತಲುಪಿದೆ ಎಂಬ ವಿಡಿಯೊಗಳು ಹರಿದಾಡುತ್ತಿವೆ. ಐದನೇ ಪೀಳಿಗೆಯ ನೆಟ್ವರ್ಕ್​ (5G) ಸೇವೆ ನೀಡುತ್ತಿರುವ ಜಿಯೊ (JIO) ಹಾಗೂ ಏರ್​ಟೆಲ್ (AIRTEL)​ ಇತ್ತೀಚಿಗೆ ತಮ್ಮ ರೀಚಾರ್ಜ್​ ಪ್ಲ್ಯಾನ್​ಗಳ ದರ ಹೆಚ್ಚಿಸಿ ಗ್ರಾಹಕರಿಗೆ ಆಘಾತ ಕೊಟ್ಟಿತ್ತು. ಹೀಗಾಗಿ ಜನರು ಕಡಿಮೆ ಬೆಲೆಗೆ ಸೇವೆ ಕೊಡುವ ಬಿಎಸ್​ಎನ್​ಎಲ್ (BSNL) ಕಡೆಗೆ ವಾಲುವ ಯೋಚನೆ ಮಾಡಿದ್ದರು. ಅವರೆಲ್ಲರಿಗೂ ಇಲ್ಲೊಂದು ಶುಭ ಸುದ್ದಿಯಿದೆ.

ಕೇಂದ್ರ ಸರ್ಕಾರದ ಸಂವಹನ ಸಚಿವ ಜ್ಯೋತಿರಾದಿತ್ಯ ಎಂ ಸಿಂಧಿಯಾ ತಮ್ಮ ಎಕ್ಸ್ (ಹಿಂದಿನ ಟ್ವಿಟರ್) ಹ್ಯಾಂಡಲ್ ಮೂಲಕ ವೀಡಿಯೊವೊಂದರನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಅವರು 5G ನೆಟ್ವರ್ಕ್​ ಮೂಲಕ ವೀಡಿಯೊ ಕಾಲ್ ಮಾಡಿದ್ದಾರೆ. “ಬಿಎಸ್ಎನ್ಎಲ್​​ನ 5ಜಿ ಫೋನ್ ಕರೆಯನ್ನು ಪರೀಕ್ಷಿಸಿದೆ ” ಎಂದು ಸಚಿವರು ಪೋಸ್ಟ್​​ನಲ್ಲಿ ಬರೆದಿದ್ದಾರೆ. ಅವರು ಸೆಂಟರ್​ ಫಾರ್​ ಡೆವಲಪ್​ಮೆಂಟ್​ ಆಫ್​ ಟೆಲಿಮ್ಯಾಟಿಕ್ಸ್​​ ಸಂಸ್ಥೆಯಲ್ಲಿ ಈ ಪರೀಕ್ಷೆ ನಡೆಸಿದ್ದಾರೆ.

ಸಚಿವರು ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಕರೆಯ ಮಾಡಿ ಮಾತನಾಡಿದ ಮಹಿಳೆಯನ್ನು ಕೋಣೆಯಿಂದ ಹೊರಗೆ ಹೋಗುವಂತೆ ಕೇಳುವುದನ್ನು ಕೇಳಬಹುದು. ಆ ಹೆಂಗಸು ಹೊರಗೆ ಹೋದಾಗಲೂ ಕರೆ ನಿರಂತರವಾಗಿ ಬರುತ್ತಿತ್ತು. ಜ್ಯೋತಿರಾದಿತ್ಯ ಅವರು ತಕ್ಷಣ ಈ ಸೇವೆಯನ್ನು ನೋಡಿ ಖುಷಿ ಪಟ್ಟರು. ಆ ಕಡೆ ಇದ್ದ ಮಹಿಳೆ “ಹೌದು, ಸರ್, ನಾನು ನಿಮ್ಮ ಮಾತನ್ನು ಕೇಳಬಲ್ಲೆ” ಎಂದು ಹೇಳಿದ್ದಾರೆ.

ದೊಡ್ಡ ಮಟ್ಟದ ಸಿದ್ಧತೆ

ಸಾರ್ವಜನಿಕ ವಲಯದ ಉದ್ಯಮವಾಗಿರುವ ಬಿಎಸ್​​ಎನ್​​ 4 ಜಿ ಮತ್ತು 5 ಜಿ ಕಡೆಗೆ ಹೊರಳುವ ನಿಟ್ಟಿನಲ್ಲಿ ತನ್ನ ತಾಂತ್ರಿಕ ಸಾಮರ್ಥ್ಯವನ್ನು ಪರೀಕ್ಷೆ ಮಾಡುತ್ತಿದೆ. ವಾಯ್ಸ್ ಆಫ್ ಇಂಡಿಯನ್ ಕಮ್ಯುನಿಕೇಷನ್ ಟೆಕ್ನಾಲಜಿ ಎಂಟಪ್ರೈಸಸ್ (ವಿಒಐಸಿಇ) ವರದಿ ಪ್ರಕಾರ, ದೇಶೀಯ ಟೆಲಿಕಾಂ ಕಂಪನಿಗಳ ಗುಂಪು ಬಿಎಸ್ಎನ್ಎಲ್ ಮೂಲಸೌಕರ್ಯವನ್ನು ಬಳಸಿಕೊಂಡು 5 ಜಿ ಸೇವೆ ನೀಡಲು ಸಿದ್ಧವಾಗಿದೆ. ಈ ಉದ್ಯಮ ಗುಂಪಿನಲ್ಲಿ ಟಾಟಾ ಕನ್ಸಲ್ಟೆನ್ಸಿ, ತೇಜಸ್ ನೆಟ್ವರ್ಕ್ಸ್, ವಿಎನ್ಎಲ್, ಯುನೈಟೆಡ್ ಟೆಲಿಕಾಂ, ಕೋರಲ್ ಟೆಲಿಕಾಂ ಮತ್ತು ಎಚ್ಎಫ್​​ಎಸಿಎಲ್ ಸೇರಿವೆ. ಇದರ ಜತೆಗೆ ಬಿಎಸ್​ಎನ್​​ಎಲ್​ 5ಜಿಯೂ ಗ್ರಾಹಕರಿಗೆ ಸಿಗಲಿದೆ.

ಸಾಮರ್ಥ್ಯ ಎಷ್ಟು?

ಕೇಂದ್ರ ಸರ್ಕಾರವು 700 ಮೆಗಾಹರ್ಟ್ಸ್, 2200 ಮೆಗಾಹರ್ಟ್ಸ್, 3300 ಮೆಗಾಹರ್ಟ್ಸ್ ಮತ್ತು 26 ಗಿಗಾಹರ್ಟ್ಸ್ ಸ್ಪೆಕ್ಟ್ರಮ್ ಬ್ಯಾಂಡ್​ಗಳನ್ನು ಬಿಎಸ್ಎನ್ಎಲ್​ಗೆ ಹಂಚಿಕೆ ಮಾಡಿದೆ. ಈ ನೆಟ್ವರ್ಕ್​ ಸಾಮರ್ಥ್ಯದಲ್ಲಿ ಬಿಎಸ್ಎನ್ಎಲ್ ದೇಶಾದ್ಯಂತ 4 ಜಿ ಮತ್ತು 5 ಜಿ ಸೇವೆ ನೀಡಲಿದೆ.

Post a comment

No Reviews