
ಲಖನೌ: ಭಾರತೀಯ ಕುಸ್ತಿ ಫೆಡರೇಶನ್‌ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಪುತ್ರ ಕರಣ್ ಭೂಷಣ್ ಸಿಂಗ್ ಬೆಂಗಾವಲು ಪಡೆಯ ವಾಹನವೊಂದು ಉತ್ತರ ಪ್ರದೇಶದ ಗೊಂಡಾದಲ್ಲಿ ಬುಧವಾರ ಬೈಕ್‌ಗೆ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದಾರೆ.
ಅಪಘಾತಕ್ಕೆ ಕಾರಣವಾದ ಟೊಯೋಟಾ ಫಾರ್ಚುನರ್ ಎಸ್‌ಯುವಿಯಲ್ಲಿ ಕರಣ್ ಸಿಂಗ್ ಇದ್ದರೇ ಎನ್ನುವುದು ಇನ್ನೂ ದೃಢಪಟ್ಟಿಲ್ಲ. ಎಸ್‌ಯುವಿಯ ಹಿಂದಿನ ಕಿಟಕಿ ಗಾಜಿನ ಮೇಲೆ 'ಪೊಲೀಸ್ ಎಸ್ಕಾರ್ಟ್' ಎಂದು ಬರೆದಿರುವುದು ಅಪಘಾತ ಸ್ಥಳದ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ. ಅಂದರೆ ಅದು ಕರಣ್ ರ ಬೆಂಗಾವಲು ಪಡೆಯ ಭಾಗವಾಗಿತ್ತು ಎನ್ನುವುದು ಸ್ಪಷ್ಟವಾಗಿದೆ.
ಯುಪಿ32ಎಚ್‌ಡಬ್ಲ್ಯು 1800 ವಾಹನದ ಸಂಖ್ಯೆ ಯಾಗಿದ್ದು ಬ್ರಿಜ್ ಭೂಷಣ್‌ರ ಕುಟುಂಬ ನಡೆಸುತ್ತಿರುವ ನಂದಿನಿ ನಗರ್ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ನೋಂದಣಿಯಾಗಿದೆ. ತನ್ನ 17 ವರ್ಷದ ಮಗ ರೆಹಾನ್ ಮತ್ತು 24 ವರ್ಷದ ಸೋದರಳಿಯ ಶಾಖ್‌ಜಾದ್ ಎದುರುಗಡೆಯಿಂದ ವೇಗವಾಗಿ ಬಂದ ಎಸ್‌ಯುವಿ ಡಿಕ್ಕಿಯಾಗಿದೆ ಎಂದು ಚಾಂದ್ ಬೇಗಂ ಎನ್ನುವವರು ದಾಖಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ. ಇಬ್ಬರೂ ಸ್ಥಳದಲ್ಲೇ ಮೃತರಾಗಿದ್ದು ಗಾಯಗೊಂಡ ಸೀತಾದೇವಿ ಎಂಬ 60 ವರ್ಷದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Poll (Public Option)

Post a comment
Log in to write reviews