
ಹಾಸನ: ಹೃದಯಾಘಾತದಿಂದ ಬಾಲಕ ಸಾವನ್ನಪ್ಪಿರುವ ಘಟನೆ ಆಲೂರು ತಾಲ್ಲೂಕಿನ ಚನ್ನಾಪುರ ಗ್ರಾಮದಲ್ಲಿ ನಡೆದಿದೆ.
ಬಾಲಕ ಸಚಿನ್(10) ಮೃತ ದುರ್ದೈವಿಯಾಗಿದ್ದಾನೆ. ಗ್ರಾಮದ ಕಾವ್ಯಶ್ರೀ ಎಂಬುವವರ ಮಗ ಸಚಿನ್ ಎಂದು ತಿಳಿಯಲಾಗಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ. ಶುಕ್ರವಾರ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿರುವರಿಂದ ಶಾಲೆಗೆ ಹೋಗದೇ ಮನೆಯಲ್ಲಿ ಟಿವಿ ನೋಡುತ್ತ ಕುಳಿತಿದ್ದ. ಅದೇ ವೇಳೆ ಏಕಾಏಕಿ ಮತ್ತೇ ನೋವು ಕಾಣಿಸಿಕೊಂಡಿದೆ. ಇದ್ದ ಜಾಗದಲ್ಲಿಯೇ ಸಚಿನ್ ಕೊನೆಯುಸಿರೆಳೆದಿದ್ದಾನೆ.
Poll (Public Option)

Post a comment
Log in to write reviews