ಬೆಂಗಳೂರು: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಮೊದಲ ಬಾರಿಗೆ ಪ್ರಯೋಗಿಸಿದ ಪೀಡಿಯಾಟ್ರಿಕ್ ಅಲೋಜೆನಿಕ್ ಬೋನ್‌ಮ್ಯಾರೋ ಟ್ರಾನ್ಸ್ ಪ್ಲಾಂಟೇಷನ್ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣ ಪ್ರಕಾಶ್ ಪಾಟೀಲ್ ಅವರು ಶ್ಲಾಘನೀಯ ವ್ಯಕ್ತಪಡಿಸಿದ್ದಾರೆ.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿನ ಬೋನ್‌ಮ್ಯಾರೋ ಫ್ರಾನ್ಸ್ ಪ್ಲಾಂಟ್ ಘಟಕಕ್ಕೆ (ಬಿಎಂಟಿ) ಶುಕ್ರವಾರ (ಜುಲೈ 26)ರಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣ ಪ್ರಕಾಶ್ ಪಾಟೀಲ್ ಭೇಟಿ ನೀಡಿ ಪೀಡಿಯಾಟ್ರಿಕ್ ಅಲೋಜೆನಿಕ್ ಬೋನ್‌ಮ್ಯಾರೋ ಟ್ರಾನ್ಸ್ ಪ್ಲಾಂಟೇಷನ್ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಬಾಲಕಿಯ ಆರೋಗ್ಯವನ್ನು ವಿಚಾರಿಸಿದರು. ಈ ಸಂದರ್ಭದಲ್ಲಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಅಡ್ಮಿನಿಸ್ಟ್ರೇಟರ್ ಎನ್.ಮಂಜುಶ್ರೀ (ಐಎಎಸ್) ಸೇರಿದಂತೆ ಆಸ್ಪತ್ರೆಯ ವೈದ್ಯರು ಉಪಸ್ಥಿತರಿದ್ದರು.
ಬಾಲಕಿಯ ಆರೋಗ್ಯ ವಿಚಾರಿಸಿದ ಸಚಿವರು, ಬಳಿಕ ಕ್ಲಿಷ್ಟಕರವಾದ ಚಿಕಿತ್ಸೆಯನ್ನು ಕರ್ನಾಟಕದಲ್ಲೆ ಕಿದ್ವಾಯಿ ಸರ್ಕಾರಿ ಆಸ್ಪತ್ರೆ ಯಶಸ್ವಿಗೊಳಿಸಿರುವುದು ಇದು ಮೊದಲ ಶಸ್ತ್ರ ಚಿಕಿತ್ಸೆಯಾಗಿದೆ. ದೇಶದಲ್ಲಿ ಇಂತಹ ಶಸ್ತ್ರ ಚಿಕಿತ್ಸೆಗಳು ಯಶಸ್ವಿಗೊಳ್ಳಲಿ ಎಂದು ಆಶಿಸಿದರು.
14 ವರ್ಷದ ಬಾಲಕಿಯೊಬ್ಬರು ತೀವ್ರವಾದ ಲ್ಯುಕೆಮಿಯಾ ಕಾಯಿಲೆಯಿಂದ (ರಕ್ತ ಕ್ಯಾನ್ಸರ್) ಬಳಲುತ್ತಿದ್ದರು. 2 ತಿಂಗಳ ಹಿಂದೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿರುವ ಅಸ್ತಿಮಜ್ಜೆ ಕಸಿ ಘಟಕಕ್ಕೆ ಚಿಕಿತ್ಸೆಗೆ ದಾಖಲಾಗಿದ್ದರು. ಬಾಲಕಿಯ ಕಿರಿಯ ಸಹೋದರನ ಕಾಂಡಕೋಶ ಬಳಸಿ ಚಿಕಿತ್ಸೆ ಯಶಸ್ವಿಗೊಳಿಸಲಾಗಿದೆ. ಕುಟುಂಬ ತುಂಬಾ ಬಡತನದಿಂದ ಕೂಡಿದ್ದರಿಂದ ಇಎಸ್‌ಐ ಯೋಜನೆ ಅಳವಡಿಸಿಕೊಂಡು ಉಚಿತವಾಗಿ ಚಿಕಿತ್ಸೆ ನೀಡಿರುವುದು ಹೆಮ್ಮೆಯ ವಿಚಾರವಾಗಿದೆ. ಬಿಎಂಟಿ ಮಕ್ಕಳ ವೈದ್ಯೆ ಡಾ.ವಸುಂಧರಾ ಕೈಲಾಸನಾಥ್ ಹಾಗೂ ಅವರ ವೈದ್ಯರ ತಂಡ ಚಿಕಿತ್ಸೆ ಯಶಸ್ವಿಗೊಳಿಸಿದ್ದಾರೆ.
ಕಿದ್ವಾಯಿಯಲ್ಲಿ ಏಪ್ರಿಲ್ 2022ರಂದು ಪೀಡಿಯಾಟ್ರಿಕ್ ಬಿಎಂಟಿ ಸ್ಥಾಪಿಸಲಾಗಿದ್ದು, ಈವರೆಗೂ ಮಕ್ಕಳು ಹಾಗೂ ವಯಸ್ಕರನ್ನೊಳಗೊಂಡಂತೆ 90 ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರಾದ ಡಾ.ಶರಣ ಪ್ರಕಾಶ್ ಪಾಟೀಲ್ ಹಾಗೂ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಅಡ್ಮಿನಿಸ್ಟ್ರೇಟರ್ ಎನ್.ಮಂಜುಶ್ರೀ (ಐಎಎಸ್) ಅವರ ನೇತೃತ್ವದಲ್ಲಿ ಕಿದ್ವಾಯಿ ಆಸ್ಪತ್ರೆ ಪ್ರಗತಿ ಹೊಂದುತ್ತಿದೆ.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿನ ಬಿಎಂಟಿಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾದ ಬಾಲಕಿಯ ಆರೋಗ್ಯವನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ವಿಚಾರಿಸಿದರು. ಈ ವೇಳೆ ಸಂಸ್ಥೆಯ ಅಡ್ಮಿನಿಸ್ಟ್ರೇಟರ್ ಎನ್.ಮಂಜುಶ್ರೀ (ಐಎಎಸ್) ಸೇರಿದಂತೆ ವೈದ್ಯರು ಉಪಸ್ಥಿತರಿದ್ದರು.
Post a comment
Log in to write reviews