
ಮುಂಬೈ : ಪ್ಯಾರಿಸ್‌ನಿಂದ ಮುಂಬೈಗೆ ಬರುತ್ತಿದ್ದ ವಿಸ್ತಾರಾ ವಿಮಾನಕ್ಕೆ ಬಾಂಬ್ ಬೆದರಿಕೆ ಹಾಕಲಾಗಿದೆ.
ಈ ಹಿನ್ನೆಲೆ ಭಾನುವಾರ ಬೆಳಗ್ಗೆ 10.19ಕ್ಕೆ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ.
ಮೂಲಗಳ ಪ್ರಕಾರ, ಪ್ಯಾರಿಸ್-ಮುಂಬೈ ವಿಮಾನದಲ್ಲಿ 294 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಇದ್ದರು.
2024 ರ ಜೂನ್ 2 ರಂದು ಪ್ಯಾರಿಸ್‌ನಿಂದ ಮುಂಬೈಗೆ ಹಾರಾಟ ನಡೆಸುತ್ತಿರುವ ಏರ್‌ಲೈನ್‌ನ ಯುಕೆ 024 ವಿಮಾನದಲ್ಲಿ ನಮ್ಮ ಸಿಬ್ಬಂದಿಯು ವಿಮಾನದ ಏರ್‌ಸಿಕ್‌ನೆಸ್ ಬ್ಯಾಗಿನಲ್ಲಿ ಬಾಂಬ್ ಬೆದರಿಕೆ ಇರುವ ಪತ್ರವನ್ನು ಗಮನಿಸಿದ್ದಾರೆ ಎಂದು ವಿಸ್ತಾರಾ ಏರ್‌ಲೈನ್ಸ್ ದೃಢಪಡಿಸಿದೆ.
ಪ್ರೋಟೋಕಾಲ್ ಅನ್ನು ಅನುಸರಿಸಿ ತಕ್ಷಣ ನಾವು ಸಂಬಂಧಿತ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ತುರ್ತಾಗಿ ಲ್ಯಾಂಡಿಂಗ್ ಮಾಡಲಾಯಿತು. ನಮ್ಮ ಗ್ರಾಹಕರು, ಸಿಬ್ಬಂದಿ ಮತ್ತು ವಿಮಾನಗಳ ಸುರಕ್ಷತೆಯು ನಮಗೆ ಅತ್ಯಂತ ಮಹತ್ವದ್ದಾಗಿದೆ ಎಂದು ವಿಸ್ತಾರ ವಕ್ತಾರರು ತಿಳಿಸಿದ್ದಾರೆ.
Poll (Public Option)

Post a comment
Log in to write reviews