
ಬಾಲಿವುಡ್ ನಟಿ ಅನನ್ಯಾ ಪಾಂಡೆ ಮತ್ತು ವಿಹಾನ್ ಸಾಮ್ರಾಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ಕಂಟ್ರೋಲ್ .ಥ್ರಿಲ್ಲರ್ ಚಿತ್ರಗಳಿಂದಲೇ ಫೇಮಸ್ ಆಗಿರುವ ವಿಕ್ರಮಾದಿತ್ಯ ಮೋಟ್ವಾನೆ ಈ ಚಿತ್ರವನ್ನ ನಿರ್ದೇಶಿಸಿದ್ದಾರೆ. AI ಟೆಕ್ನಾಲಜಿ ಮತ್ತು ಸೋಷಿಯಲ್ ಮೀಡಿಯಾಗಳ ಬಳಕೆಯನ್ನೇ ಆಧಾರವಾಗಿಟ್ಟುಕೊಂಡು ಥ್ರಿಲ್ಲರ್ ಶೈಲಿಯ ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಇದೀಗ ನೆಟ್‌ಫ್ಲಿಕ್ಸ್ ಈ ಚಿತ್ರದ ಟ್ರೈಲರ್ ಅನ್ನು ಇಂದು (ಸೆಪ್ಟೆಂಬರ್ 25) ಬಿಡುಗಡೆ ಮಾಡಿದೆ.
ಥ್ರಿಲ್ಲಿಂಗ್ ಆಗಿದೆ ಚಿತ್ರದ ಟ್ರೈಲರ್
ಕಂಟ್ರೋಲ್ ಚಿತ್ರದಲ್ಲಿ ನೆಲ್ಲಾ ಅವಸ್ಥಿಯಾಗಿ ಅನನ್ಯ ಪಾಂಡೆ ಮತ್ತು ಜೋ ಮಸ್ಕರೇನ್ಸ್ ಪಾತ್ರದಲ್ಲಿ ವಿಹಾನ್ ಸಾಮ್ರಾಟ್ ನಟಿಸಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ಈ ಇಬ್ಬರೂ ಪ್ರೀತಿಯಲ್ಲಿ ಬೀಳುತ್ತಾರೆ ಎಂದು ಟ್ರೇಲರ್ ತೋರಿಸುತ್ತದೆ. ಬಳಿಕ ಲವ್ ಫೇಲ್ಯೂರ್ ಸಹ ಆಗುತ್ತದೆ. ಆ ನೋವಿನಿಂದ ಹೊರಬರಲು ನೆಲ್ಲಾ ಅವಸ್ಥಿ, ಎಐ ತಂತ್ರಜ್ಞಾನದ ಮೊರೆ ಹೋಗುತ್ತಾಳೆ. ಮುಂದೇನಾಗುತ್ತದೆ ಎಂಬುದೇ ಈ ಸಿನಿಮಾದ ಒಂದೆಳೆ.
Poll (Public Option)

Post a comment
Log in to write reviews