
ಮುಂಬೈ: ಬಾಲಿವುಡ್ ನಟ ಗೋವಿಂದ ಕಾಲಿಗೆ ಗುಂಡು ಹಾರಿಸಿಕೊಂಡಿದ್ದು, ಕೂಡಲೇ ಕುಟುಂಬಸ್ಥರು ಅವರನ್ನು ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಟ ಗೋವಿಂದ ಲೈಸೆನ್ಸ್ ರಿವಾಲ್ವರ್ ಬಳಕೆ ಮಾಡುತ್ತಿದ್ದರು. ಮನೆಯಿಂದ ಹೊರಡುವಾಗ ರಿವಾಲ್ವರ್ ಚೆಕ್ ಮಾಡುತ್ತಿದ್ದರು. ಆದರೆ ಇಂದು ಮುಂಜಾನೆ 4.45ರ ಸುಮಾರಿಗೆ ತಮ್ಮ ಜುಹು ನಿವಾಸದಿಂದ ಕೋಲ್ಕತ್ತಾಗೆ ಹೊರಡುವ ವೇಳೆಗೆ ರಿವಾಲ್ವರ್ ಲಾಕ್ ಓಪನ್ ಆಗಿದ್ದರಿಂದ ಜೇಬಲ್ಲಿ ರಿವಾಲ್ವರ್ ಇಟ್ಟುಕೊಳ್ಳುವಾಗ ಮಿಸ್ ಫೈರ್ ಆಗಿ, ಗೋವಿಂದ ಕಾಲಿಗೆ ಬುಲೆಟ್ ತಗುಲಿದೆ. ಅವರದ್ದೇ ರಿವಾಲ್ವರ್ನಿಂದ ಮಿಸ್ ಫೈರಿಂಗ್ ಆಗಿದೆ. ಸದ್ಯ ಮುಂಬೈನ ಅಂಧೇರಿಯಲ್ಲಿರುವ ಆಸ್ಪತ್ರೆಯಲ್ಲಿ ನಟರಿಗೆ ಟ್ರೀಟ್ಮೆಂಟ್ ಮುಂದುವರಿದಿದೆ. ಮುಂಬೈ ಪೊಲೀಸರು ಆಸ್ಪತ್ರೆಗೆ ಧಾವಿಸಿ, ಈ ಸಂಬಂಧ ವಿಚಾರಣೆ ನಡೆಸಲಿದ್ದಾರೆ.
ಕೋಲ್ಕತ್ತಾದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಹೋಗಲು ಬೆಳಿಗ್ಗೆ 6 ಗಂಟೆಗೆ ಫ್ಲೈಟ್ ಇತ್ತು. ನಾನು ಮೊದಲೇ ವಿಮಾನ ನಿಲ್ದಾಣವನ್ನು ತಲುಪಿದ್ದೆ. ಗೋವಿಂದ ಅವರು ತಮ್ಮ ನಿವಾಸದಿಂದ ವಿಮಾನ ನಿಲ್ದಾಣಕ್ಕೆ ತೆರಳಲು ಹೊರಟ ವೇಳೆ ಈ ಅವಘಡ ಸಂಭವಿಸಿದೆ. ಸದ್ಯ ವೈದ್ಯರು ಗುಂಡು ಹೊರತೆಗೆದಿದ್ದಾರೆ ಎಂದು ನಟನ ಮ್ಯಾನೇಜರ್ ಶಶಿ ಸಿನ್ಹಾ ಹೇಳಿದ್ದಾರೆ.
Poll (Public Option)

Post a comment
Log in to write reviews