ಹೆವಿ ಲೈಸೆನ್ಸ್ ಮತ್ತು ಅನುಭವ ಇಲ್ಲದ 50 ಎಲೆಕ್ಟ್ರಿಕ್ ಬಸ್ ಚಾಲಕರಿಗೆ ಗೇಟ್ ಪಾಸ್ ನೀಡಿದ ಬಿಎಂಟಿಸಿ !
ಬೆಂಗಳೂರು: ಬಿಎಂಟಿಸಿ ಅಂದರೆ ರಾಜಧಾನಿ ಜನರ ಜೀವನಾಡಿ. ಪ್ರತಿದಿನ ಬಿಎಂಟಿಸಿ ಬಸ್‌ಗಳನ್ನೇ ನಂಬಿಕೊಂಡು ಲಕ್ಷಾಂತರ ಜನ ಕೆಲಸಕ್ಕೆ ಪ್ರಯಾಣಿಸುತ್ತಾರೆ. ಎಲ್ಲೆಡೆಯೂ ಲಭ್ಯವಿರುವ ಬಿಎಂಟಿಸಿ ಬಸ್‌ಗಳು ಹಲವರ ಪಾಲಿಗೆ ವರದಾನವಾಗಿದೆ. ಕೆಲ ದಿನಗಳ ಹಿಂದಷ್ಟೇ ಬಿಎಂಟಿಸಿಯ ಹೊಸ ಎಲೆಕ್ಟ್ರಿಕ್ ಬಸ್ಗಳಲ್ಲಿ ಕೇರಳದ ಚಾಲಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಇದರಿಂದ ಕನ್ನಡಿಗರಿಗೆ ಉದ್ಯೋಗಾವಕಾಶ ಕಡಿಮೆಯಾಗಿತ್ತು. ಕೆಲಸಕ್ಕೆ ಸೇರಿಕೊಳ್ಳುವ ಮೊದಲು 22.500 ರೂಪಾಯಿ ಸಂಬಳ ಕೊಡುತ್ತೇವೆ ಎಂದು ಹೇಳಿ ಕೊನೆಯಲ್ಲಿ ಕೇವಲ 18 ಸಾವಿರ ರೂಪಾಯಿ ಮಾತ್ರ ಸಂಬಳ ನೀಡುತ್ತಿದ್ದರು. ಸರಿಯಾದ ಸಮಯಕ್ಕೆ ಸಂಬಳ ಕೂಡಾ ದೊರೆಯದ ಕಾರಣ ಹಲವಾರು ಯುವಕರು ಡ್ರೈವರ್ ಕೆಲಸಕ್ಕೆ ಸೇರಲು ಹಿಂದೇಟು ಹಾಕಿದ್ದರು.
ಆದ್ದರಿಂದ ಸರ್ಕಾರ ಕೇರಳದ ಹೆವಿ ಡ್ರೈವಿಂಗ್ ಲೈಸನ್ಸ್ ಇಲ್ಲದ ಚಾಲಕರನ್ನು ಆರ್ಯ ಟ್ರಾನ್ಸ್ ಸೆಲೂಷನ್ ಏಜೆನ್ಸಿ ಮೂಲಕ ನೇಮಕ ಮಾಡಿಕೊಂಡಿತ್ತು. ಈ ಕುರಿತು ಸಾರಿಗೆ ನೌಕರರ ಮುಖಂಡ ಚಂದ್ರು, ಮೊದಲು ಎಲೆಕ್ಟ್ರಿಕ್ ಬಸ್ ಕಂಪನಿಗಳು ಏಜೆನ್ಸಿ ಮೂಲಕ ಸಣ್ಣಪುಟ್ಟ ಯುವಕರಿಗೆ ಮತ್ತು ಕೇರಳ, ಬಿಹಾರ, ಅಸ್ಸಾಂದವರಿಗೆ ಡ್ರೈವರ್ ಕೆಲಸ ನೀಡುವುದನ್ನು ನಿಲ್ಲಿಸಿ ಕನ್ನಡಿಗರಿಗೆ ಮೊದಲು ಆದ್ಯತೆ ನೀಡಬೇಕು. ಹಾಗೂ ಹೆವಿ ಡ್ರೈವಿಂಗ್ ಲೈಸನ್ಸ್ ಹೊಂದಿದವರನ್ನು ಮಾತ್ರ ಚಾಲಕರನ್ನಾಗಿ ನೇಮಿಸಬೇಕು ಎಂದು ಹೇಳಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಎಂಟಿಸಿ ಇತ್ತೀಚಿಗಷ್ಟೇ ನೇಮಕ ಮಾಡಿಕೊಂಡ ಹೆವಿ ಡ್ರೈವಿಂಗ್ ಲೈಸನ್ಸ್ ಮತ್ತು ಅನುಭವ ಇಲ್ಲದ ಚಾಲಕರನ್ನು ಕೆಲಸದಿಂದ ವಜಾ ಮಾಡಿದೆ.
Post a comment
Log in to write reviews