
ಬೆಂಗಳೂರು: ಬಿಎಂಟಿಸಿ ಬಸ್ ಹರಿದು ವಿಶೇಷಚೇತನ ವ್ಯಕ್ತಿಯೊರ್ವ ಸಾವನ್ನಪ್ಪಿರುವ ಘಟನೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ನಡೆಯಿತು. ರಾತ್ರಿ 12:15ರ ಸುಮಾರಿಗೆ ಬಸ್ ನಿಲ್ದಾಣದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವಿಶೇಷಚೇತನ ವ್ಯಕ್ತಿಗೆ ವೇಗವಾಗಿ ಬಂದ ಬಸ್ ಡಿಕ್ಕಿಯಾಗಿದೆ. ಈ ವೇಳೆ ಅವರು ನೆಲಕ್ಕೆ ಬಿದ್ದಿದ್ದು, ತಲೆಯ ಮೇಲೆ ಬಸ್‌ನ ಮುಂದಿನ ಚಕ್ರ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತ ವ್ಯಕ್ತಿಯನ್ನು ಮೈಸೂರು ಮೂಲದ ಕೆಆರ್ ಪುರಂನ ನಿಸರ್ಗ ಲೇಔಟ್ ನಿವಾಸಿ ಸುಪ್ರೀತ್ ಜೆಎನ್ (33) ಎಂದು ಗುರುತಿಸಲಾಗಿದೆ. ಕೆಆರ್ ಪುರಂ ಸಂಚಾರ ಪೊಲೀಸರು ಬಲ್ ಚಾಲಕನನ್ನು ಬಂಧಿಸಿ ಬಸ್ ವಶಪಡಿಸಿಕೊಂಡಿದ್ದಾರೆ.
ಅಜಾಗರೂಕತೆಯಿಂದ ಚಾಲನೆ ಮಾಡಿದ ಬಸ್ ಚಾಲಕ ಗೋಪಾಲ್ ಅವರನ್ನು ಉಪ್ಪಾರಪೇಟೆ ಸಂಚಾರಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತನ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ.
Poll (Public Option)

Post a comment
Log in to write reviews