ಕರ್ನಾಟಕ
ಕೇವಲ 11 ತಿಂಗಳಲ್ಲಿ ಪ್ರಯಾಣಿಕರಿಂದ ಕೋಟ್ಯಾಂತರ ರೂ ದಂಡ ವಸೂಲಿ ಮಾಡಿದ ಬಿ ಎಂ ಆರ್ ಸಿ ಎಲ್

ಕೇವಲ 11 ತಿಂಗಳಲ್ಲಿ ಬಿ ಎಂ ಆರ್ ಸಿ ಎಲ್ (ಮೆಟ್ರೋ) ನಿಯಮ ಉಲ್ಲಂಘಿಸಿದ ಪ್ರಯಾಣಿಕರಿಂದ ಬರೊಬ್ಬರಿ 5.38 ಕೋಟಿ ರೂಪಾಯಿ ದಂಡವನ್ನು ವಸೂಲಿ ಮಾಡಿದೆ.
ನಮ್ಮ ಮೆಟ್ರೋ ಒಂದಲ್ಲ ಒಂದು ವಿಷಯದಲ್ಲಿ ಸದಾ ಸುದ್ದಿಯಲ್ಲಿರುತ್ತದೆ. ಹಾಗೆಯೇ ಪ್ರಯಾಣಿಕರ ಸುರಕ್ಷತೆಯ ದೃಷ್ಠಿಯಿಂದ ಹಲವು ನಿಯಮಗಳನ್ನು ಸಹ ಜಾರಿ ಮಾಡಿದೆ. ಈ ನಿಯಮಗಳನ್ನು ಮೀರಿದರೆ ಅವರಿಗೆ ದಂಡವನ್ನು ವಿಧಿಸುತ್ತದೆ. ಹೀಗೆ ದಂಡ ವಿಧಿಸಿದ ಹಲವಾರು ನಿದರ್ಶನಗಳನ್ನು ನಾವು ನೋಡಬಹುದು.
ಇನ್ನು ಕಳೆದ ಜೂನ್ ಅಂದರೆ 2023 ರಿಂದ ಇಲ್ಲಿಯವರೆಗೆ ಮೆಟ್ರೋದಲ್ಲಿ 20 ನಿಮಿಷಕ್ಕೂ ಹೆಚ್ಚು ಕಾಲ ಕಳೆದ 10 ಲಕ್ಷದ 75 ಸಾವಿರ ಪ್ರಯಾಣಿಕರ ಬಳಿ ಒಟ್ಟು 5.38 ಕೋಟಿ ದಂಡವನ್ನು ವಸೂಲಿ ಮಾಡಿದೆ.
ಪ್ರಯಾಣಿಕರು ಟಿಕೆಟ್ ಪಡೆದ ನಂತರ ಒಂದು ಮೆಟ್ರೋ ನಿಲ್ದಾಣದಲ್ಲಿ 20 ನಿಮಿಷ ಇರುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ನಿಯಮ ಮೀರಿ ಇದಕ್ಕೂ ಹೆಚ್ಚು ಸಮಯ ಇದ್ದರೆ ಗರಿಷ್ಠ 50 ರೂಪಾಯಿ ಅಥವಾ ಗಂಟೆಗೆ 10 ರೂಪಾಯಿ ದಂಡ ಕಟ್ಟಬೇಕಾಗುತ್ತದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ
Poll (Public Option)

Post a comment
Log in to write reviews