
ದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ನೀಡಿರುವ ಊಟದಲ್ಲಿ ಬ್ಲೇಡ್ ಪತ್ತೆಯಾಗಿದೆ. ಬೆಂಗಳೂರಿನಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ಊಟದಲ್ಲಿ ಪತ್ತೆಯಾದ ಬ್ಲೇಡ್ ಕಂಡು ಪ್ರಯಾಣಿಕ ಶಾಕ್ ಆಗಿದ್ದಾನೆ. ಘಟನೆ ಬಗ್ಗೆ ಏರ್‌ಇಂಡಿಯಾ ವಿಮಾನ ಸಂಸ್ಥೆಗೆ ಪ್ರಯಾಣಿಕ ದೂರು ನೀಡಿದ್ದು, ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯಿಂದ ತನಿಖೆ ನಡೆದಿದೆ.
ಏರ್ ಇಂಡಿಯಾ ವಿಮಾನದಲ್ಲಿ ನೀಡಲಾದ ಊಟದಲ್ಲಿ ಲೋಹದ ತುಂಡು ಒಂದು ಕಾಣಿಸಿದ್ದು, ಅದು ಬ್ಲೇಡ್‌ನಂತೆ ಕಾಣುತ್ತಿತ್ತು. ಕೆಲವು ಸೆಕೆಂಡ್ ಅದನ್ನು ಜಗಿದ ನಂತರವೇ ನನಗೆ ಅದರ ಅನುಭವವಾಯಿತು. ಅದೃಷ್ಟವಶಾತ್, ಯಾವುದೇ ಹಾನಿ ಸಂಭವಿಸಿಲ್ಲ. ಆದರೆ ಒಂದು ವೇಳೆ ಮಗುವಿಗೆ ತಿನ್ನಿಸುವ ಆಹಾರದಲ್ಲಿ ಈ ರೀತಿಯಾಗಿ ಲೋಹದ ತುಂಡು ಅಥವಾ ಬ್ಲೇಡ್ ಇದ್ದರೆ ಏನು ಮಾಡುವುದು ಎಂದು ಪ್ರಯಾಣಿಕ ಫೋಟೋ ಸಹಿತ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾನೆ.
Poll (Public Option)

Post a comment
Log in to write reviews