
ಬೆಂಗಳೂರು : ಸಾಮಾಜಿಕ ಕಾರ್ಯಕರ್ತ ಭಾಸ್ಕರ್ ಪ್ರಸಾದ್ಗೆ ಬ್ಲಾಕ್ ಮೇಲ್ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿರುವ ಆರೋಪ ಕೇಳಿ ಬಂದಿದ್ದು ಸಂಧ್ಯಾ, ಪವಿತ್ರಾ ನಾಗರಾಜ್ ಎಂಬುವವರ ವಿರುದ್ದ ದೂರು ದಾಖಲಾಗಿದೆ. ಬೆದರಿಕೆ ಹಾಕಿ 10 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆಂದು ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪವಿತ್ರಾ ಹಾಗೂ ಸಂಧ್ಯಾ ಪವಿತ್ರಾ ನಾಗರಾಜ್ ವಿರುದ್ದ ಭಾಸ್ಕರ್ ಪ್ರಸಾದ್ ಅವರು ಎಫ್‌ಐಆರ್ ದಾಖಲಾಗಿದೆ.
ಪವಿತ್ರಾ ಎಂಬುವವರು ಚಳುವಳಿ ಹಾಗೂ ಹೋರಾಟಗಳಲ್ಲಿ ಭಾಸ್ಕರ್ ಪ್ರಸಾದ್ಗೆ ಪರಿಚಯವಾಗಿದ್ದರು. ಸುಮಾರು 2 ವರ್ಷಗಳಿಂದ ಇವರಿಬ್ಬರ ನಡುವೆ ಮಾತುಕಥೆ ಇತ್ತು. ಕಳೆದ ಆ.8ರಂದು ಪವಿತ್ರಾ ಅವರು ವಾಟ್ಸಾಪ್ ಮೂಲಕ ಲೈಂಗಿಕ ಸಂಪರ್ಕಕ್ಕೆ ಒತ್ತಾಯ ಮಾಡಿದ್ದಾರೆ. ಮಾನಹರಣ ಮಾಡುವ ಉದ್ದೇಶದಿಂದ ಬೆದರಿಕೆ ಹಾಕಿ 10 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ನಂತರ ನೇರವಾಗಿ ಸಿಕ್ಕಾಗ ಅಪಪ್ರಚಾರ ಮಾಡಿ, ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಭಾಸ್ಕರ್ ಪ್ರಸಾದ್ ಅವರು ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ 10 ಲಕ್ಷ ಹಣ ನೀಡದಿದ್ದರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Poll (Public Option)

Post a comment
Log in to write reviews