
ಬೆಂಗಳೂರು: 300 ಸ್ಥಾನಗಳನ್ನು ಕೂಡಾ ಸರಿಯಾಗಿ ಗೆಲ್ಲಲಾಗದ ಕಾರಣ ಬಿಜೆಪಿ ಅಭ್ಯರ್ಥಿಗಳು ಮುಖಭಂಗ ಎದುರಿಸುವ ಹಾಗಾಗಿದೆ ಎಂದು ನಟ ಚೇತನ್ ಬಿಜೆಪಿಗೆ ಲೇವಡಿ ಮಾಡಿದ್ದಾರೆ.
ಅಧಿಕಾರ ಪಡೆಯುವ ಮುನ್ನವೇ 400 ಸ್ಥಾನಗಳನ್ನು ಗಳಿಸಿ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂದು ಎಲ್ಲೆಡೆ ಹೇಳಿಕೊಂಡಿದ್ದರು. ಇದೀಗ 300 ಸ್ಥಾನ ಗೆಲ್ಲಲಾಗಲಿಲ್ಲ. ಎಲ್ಲರ ನಿರೀಕ್ಷೆಯಂತೆ ಮೋದಿ 3ನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ. ಬಿಜೆಪಿಗೆ ಅಧಿಕಾರಕ್ಕೆ ಬರಲು ಎನ್‌ಡಿಎ ಅಗತ್ಯವಿದೆ. ಇದು ಬಿಜೆಪಿಗೆ ಬಹು ದೊಡ್ಡ ಪಾಠ. ಬಿಜೆಪಿ ತನಗೆ ಬೇಕಾದ ರೀತಿಯಲ್ಲಿ ಆಡಳಿತ ನಡೆಸುವ ಹಾಗಿಲ್ಲ. ಒಂದು ರಾಷ್ಟ್ರ, ಒಂದು ಚುನಾವಣೆಯಂತಹ ಒಕ್ಕೂಟ ವಿರೋಧಿ ನೀತಿ ಸುಲಭವಾಗಿ ಜಾರಿಗೆ ತರಲು ಸಾಧ್ಯವಿಲ್ಲ. ಹಾಗಾಗಿ ಇದು ಮೋದಿಯವರ ವಿಜಯವಲ್ಲ, ಪ್ರಜಾಪ್ರಭುತ್ವದ ವಿಜಯ ಎಂದಿದ್ದಾರೆ.
Poll (Public Option)

Post a comment
Log in to write reviews