
ಬೆಂಗಳೂರು : ತೈಲ ದರ ಏರಿಕೆ ಖಂಡಿಸಿ ಸರ್ಕಾರದ ವಿರುದ್ಧ ಬಿಜೆಪಿ ಇಂದು (ಜೂನ್ 17ಸೋಮವಾರ) ನಗರದ ಪ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಸಿಟಿ ರವಿ.
ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುಂಚೆ ಪೆಟ್ರೋಲ್ ಡೀಸೆಲ್ ಇಳಿಕೆ ಮಾಡುವುದಾಗಿ ತಿಳಿಸಿದ್ದರು. ಆದರೆ ಬಕ್ರೀದ್ ಹಿಂದಿನ ದಿನ ದರ ಏರಿಸುವ ಮೂಲಕ ರಾಜ್ಯದ ಜನರನ್ನು ಬಕ್ರ ಮಾಡಿದ್ದಾರೆ ಎಂದರು.
ಮದ್ಯದ ದರ ಹೆಚ್ಚಳ, ಹಾಲಿನ ದರ ಹೆಚ್ಚಳ ಮಾಡುವ ಜೊತೆಗೆ ರೈತರಿಗೆ ಕೊಡಿತಿದ್ದ ಸಬ್ಸಿಡಿ ನಿಲ್ಲಿಸಿದ್ದಾರೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ಊಸರವಳ್ಳಿತರ ಬಣ್ಣ ಬದಲಾಯಿಸಿ, ಕೇಂದ್ರದ ಮೇಲೆ ಬೊಟ್ಟು ಮಾಡ್ತಿದ್ದಾರೆ.
ಬಕ್ರಿದ್ ದಿನ ಸಿದ್ದರಾಮಯ್ಯ ಮಾತ್ರ ಟೋಪಿ ಹಾಕಿಕೊಳ್ಳುತ್ತಾರೆ ಎಂದುಕೊಂಡಿದ್ದೆ. ಆದರೆ ಈಗ ರಾಜ್ಯದ ಜನರಿಗೂ ಟೋಪಿ ಹಾಕಿ ಮೂರು ಕಣ್ಣಿನ ಹಳೇ ಚಿಪ್ಪು ಕೊಟ್ಟಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
Poll (Public Option)

Post a comment
Log in to write reviews