ಟಾಪ್ 10 ನ್ಯೂಸ್
ಪ್ರಧಾನಿಗೆ ಅವಮಾನ: ಸಿಎಂ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠಕ ದೂರ

ಮೋದಿ ಒಬ್ಬ ಉತ್ತಮ ನಾಟಕಗಾರ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠಕ ಚುನಾವಣಾ ಆಯೋಗಕ್ಕೆ ದೂರನ್ನು ನೀಡಿದೆ.
ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠಕದ ರಾಜ್ಯ ಸಂಚಾಲಕ ಗಣೇಶ್ ರಾವ್ ಕೇಸರ್ಕರ್, ಹಾಗೂ ಪ್ರಮುಖ ರಂಗಭೂಮಿ ಕಲಾವಿದರು ಇಂದು ಶೇಷಾದ್ರಿ ರಸ್ತೆಯಲ್ಲಿರುವ ಚುನಾವಣಾ ಆಯೋಗದ ಕಚೇರಿಯಲ್ಲಿ ಮುಖ್ಯಮಂತ್ರಿಗಳ ವಿರುದ್ಧ ದೂರು ಸಲ್ಲಿಸಿದರು.
ಮುಖ್ಯಮಂತ್ರಿಗಳು ತಮ್ಮ ಹೇಳಿಕೆ ಮೂಲಕ ಕಲಾವಿದರಿಗೆ ಅವಮಾನ ಮಾಡಿದ್ದಾರೆ. , ದೇಶದ ಉನ್ನತ ಸ್ಥಾನದ ವ್ಯಕ್ತಿಗಳನ್ನು ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಸದಸ್ಯರು ಆರೋಪಿಸಿದರು. ಈ ಮನವಿಯ ಜೊತೆಗೆ ‘ಮೋದಿ ಒಳ್ಳೆಯ ನಾಟಕಕಾರ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ ಪತ್ರಿಕಾ ತುಣುಕನ್ನೂ ಲಗತ್ತಿಸಲಾಗಿದೆ.
Poll (Public Option)

Post a comment
Log in to write reviews