
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಕೊಲೆ ಬೆದರಿಕೆ ಹಾಕಿದ್ದು, ದ್ವೇಷವನ್ನು ಕೊನೆಗಾಣಿಸಲು 5 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ವಾಟ್ಸಾಪ್ ಮೂಲಕ ಮುಂಬೈ ಟ್ರಾಫಿಕ್ ಪೊಲೀಸರಿಗೆ ಕಳುಹಿಸಲಾದ ಸಂದೇಶದಲ್ಲಿ ಸಲ್ಮಾನ್ ಖಾನ್ ಬದುಕಿ ಉಳಿಯಬೇಕಾದರೆ ಲಾರೆನ್ಸ್ ಬಿಷ್ಣೋಯ್ ಜೊತೆಗಿನ ದ್ವೇಷವನ್ನು ಕೊನೆಗಾಣಿಸಲು ಬಯಸಿದರೆ 5 ಕೋಟಿ ನೀಡಬೇಕು. ಹಣವನ್ನು ಕೊಡದಿದ್ದರೆ ಇತ್ತೀಚೆಗೆ ಬಿಷ್ಣೋಯ್ ಗ್ಯಾಂಗ್ ಸದಸ್ಯರಿಂದ ಹತ್ಯೆಗೀಡಾದ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿಗಿಂತ ನಟನ ಭವಿಷ್ಯವು ಕೆಟ್ಟದಾಗಿರುತ್ತದೆ ಎಂದು ಗ್ಯಾಂಗ್ ಸಂದೇಶ ರವಾನಿಸಿದೆ.
ಸಲ್ಮಾನ್ ಖಾನ್‌ರವರು ಹಿಂದಿನ ಬೆದರಿಕೆಗಳ ನಂತರ ಹೆಚ್ಚಿನ ಎಚ್ಚರಿಕೆ ವಹಿಸಿದ್ದಾರೆ. ಅವರ ಬಾಂದ್ರಾ ನಿವಾಸದ ಸುತ್ತಲೂ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಮುಂಬೈ ಪೊಲೀಸರು ಸಂದೇಶದ ಮೂಲವನ್ನು ಪತ್ತೆಹಚ್ಚುವ ಕೆಲಸ ಮಾಡುತ್ತಿದ್ದಾರೆ.
ನಿನ್ನೆ, ನವಿ ಮುಂಬೈ ಪೊಲೀಸರು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಪ್ರಮುಖ ಸದಸ್ಯನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಸುಖ ಅಲಿಯಾಸ್ ಸುಖಬೀರ್ ಬಲ್ಬೀರ್ ಸಿಂಗ್ ಎಂದು ಗುರುತಿಸಲಾಗಿದ್ದು, ಹರಿಯಾಣದ ಪಾಣಿಪತ್‌ನಲ್ಲಿ ಬಂಧಿಸಲಾಗಿದೆ.
ಯೋಜಿತ ದಾಳಿ ನಡೆಸಲು ಸಿಂಗ್ ತನ್ನ ಹ್ಯಾಂಡ್ಲರ್, ಪಾಕಿಸ್ತಾನಿ ಮೂಲದ ವ್ಯಕ್ತಿ ಡೋಗರ್ ಎಂಬಾತನೊಂದಿಗೆ ನೇರ ಸಂಪರ್ಕದಲ್ಲಿದ್ದು, ಸಂಚು ರೂಪಿಸಲು ಪಾಕಿಸ್ತಾನದಿಂದ ಕಳ್ಳಸಾಗಣೆಯಾದ AK-47, M16 ಮತ್ತು AK-92 ಸೇರಿದಂತೆ ಹೆಚ್ಚಿನ ಸಾಮರ್ಥ್ಯದ ಬಂದೂಕುಗಳನ್ನು ಬಳಸಲು ಗ್ಯಾಂಗ್ ಉದ್ದೇಶಿಸಿತ್ತು.
Poll (Public Option)

Post a comment
Log in to write reviews