
ನವದೆಹಲಿ : ದೇಶದ ಹಲವು ರಾಜ್ಯಗಳಲ್ಲಿ ಹಕ್ಕಿಜ್ವರ (ಎಚ್5ಎನ್1) ಸೋಂಕು ರೋಗ ಕಂಡು ಬಂದಿದ್ದು ಎಚ್ಚರಿಕೆ ಇರುವಂತೆ ಇಲಾಖೆಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.
ಖಾಸಗಿ ವೈದ್ಯರು ಸೇರಿ ಎಲ್ಲ ಆರೋಗ್ಯ ಕಾರ್ಯಕರ್ತರಿಗೆ ಈ ರೋಗಲಕ್ಷಣಗಳ ಕುರಿತು ಮಾಹಿತಿ ನೀಡುವ ಜೊತೆಗೆ ಜಾಗೃತೆಯಿಂದ ಇರಲು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದೆ.
ಆಂಧ್ರಪ್ರದೇಶದ ನೆಲ್ಲೂರು, ಮಹಾರಾಷ್ಟ್ರದ ನಾಗುರ, ಜಾರ್ಖಂಡ್‌ನ ರಾಂಚಿ, ಕೇರಳದ ಅಲಪ್ಪುಳ, ಕೊಟ್ಟಾಯಂ ಮತ್ತು ಪತ್ತನಂತಿಟ್ಟ ಜಿಲ್ಲೆಗಳ ಕೋಳಿಗಳಲ್ಲಿ ಎಚ್5ಎನ್1 ಸೋಂಕು ಪತ್ತೆಯಾಗಿದೆ ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ಪಶುಸಂಗೋಪನೆ ಮತ್ತು ಹೈನುಗಾರಿಕೆ ಮೇ 25ರಂದು ಹೊರಡಿಸಿದ ಮಾಹಿತಿ ಈ ಸಂಬಂಧ ಮಾಹಿತಿ ನೀಡಿದೆ.
ಈ ಸೋಂಕು ಸಾಮಾನ್ಯವಾಗಿ ವಲಸೆ ಪಕ್ಷಿಗಳು, ಕೋಳಿಗಳಲ್ಲಿ ಕಂಡುಬರುತ್ತದೆ. ಮಾನವರಿಗೂ ಹರಡುವ ಸಾಮರ್ಥ್ಯ ಹೊಂದಿದ್ದು, ಹರಡುವಿಕೆ ತಡೆಗಟ್ಟಲು ಮತ್ತು ತಗ್ಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಪಶುಸಂಗೋಪನಾ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಿವಂತೆ ಕೇಂದ್ರ ಸರ್ಕಾರ ಎಚ್ಚರಿಸಿದೆ.
Poll (Public Option)

Post a comment
Log in to write reviews