
ರಾಯಚೂರು: ಬೈಕ್‌ಗೆ ಗುಡ್ಸ್ ಲಾರಿ ಢಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರನೋರ್ವ ಭೀಕರವಾಗಿ ಮೃತಪಟ್ಟು, ಓರ್ವ ವ್ಯಕ್ತಿ ಗಾಯಗೊಂಡ ಘಟನೆ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಹೊರವಲಯದಲ್ಲಿ ಗುರುವಾರ ರಾತ್ರಿ ಈ ಭೀಕರ ಅಪಘಾತ ನಡೆದಿದೆ. ಶಬ್ಬೀರ್ (38) ಮೃತ ಬೈಕ್ ಸವಾರ ಹಾಗೂ ಸಾಬಣ್ಣ ಗಾಯಗೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ.
ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಶಬ್ಬೀರ್ ಹಾಗೂ ಸಾಬಣ್ಣ ಇಬ್ಬರು ಕಪಗಲ್ ಗ್ರಾಮದಿಂದ ನೀರಮಾನ್ವಿಗೆ ಬೈಕ್ ಮೇಲೆ ತೆರಳುವ ವೇಳೆ ಹಿಂಬದಿಯಿಂದ ಬಂದ ಗುಡ್ಸ್ ಲಾರಿ ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ.
ಭೀಕರ ಅಪಘಾತದಲ್ಲಿ ಬೈಕ್ ಸವಾರ ಶಬ್ಬೀರ್ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನಪ್ಪಿದ್ದಾನೆ, ಗಾಯಗೊಂಡ ಸಾಬಣ್ಣ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎನ್ನಲಾಗಿದೆ.
Poll (Public Option)

Post a comment
Log in to write reviews