ಮಂಗಳೂರು :ಮಂಗಳೂರು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಅತಿದೊಡ್ಡ ಡ್ರಗ್ (Drug) ಜಾಲ ಪತ್ತೆ ಹಚ್ಚಿದ್ದಾರೆ. ರಾಜ್ಯದ ವಿವಿಧಡೆ ಡ್ರಗ್ ಪೂರೈಕೆ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಆತನಿಂದ ಬರೋಬ್ಬರಿ ಆರು ಕೆ.ಜಿಯ ಆರು ಕೋಟಿ ರೂ. ಮೌಲ್ಯದ ಎಂಡಿಎಂ ಡ್ರಗ್ ವಶಪಡಿಸಿಕೊಂಡಿದ್ದಾರೆ. ಇದು ಮಂಗಳೂರು ನಗರ ಇತಿಹಾಸದಲ್ಲೇ ಅತೀ ದೊಡ್ಡ ಕಾರ್ಯಾಚರಣೆಯಾಗಿದೆ.
ಸಿಸಿಬಿ ಪೊಲೀಸರು ವಾರದ ಹಿಂದೆ ಹೈದರ್ ಅಲಿ ಎಂಬಾತನನ್ನು ವಶಕ್ಕೆ ಪಡೆದಿದ್ದರು. ಈತನನ್ನು ವಿಚಾರಣೆಗೆ ಒಳಪಡಿಸಿದಾಗ ನೈಜೀರಿಯಾ ಪ್ರಜೆಯ ಕೈವಾಡ ಇರುವುದು ತಿಳಿದುಬಂದಿದೆ. ನೈಜೀರಿಯಾ ಪ್ರಜೆಯ ಮಾಹಿತಿ ಕಲೆ ಹಾಕಿದ ಸಿಸಿಬಿ ಪೊಲೀಸರು ಆತ ಬೆಂಗಳೂರಿನಲ್ಲಿ ವಾಸವಿರುವುದು ತಿಳಿದಿದೆ. ಕೂಡಲೆ ಏಚ್ಚೆತ್ತುಕೊಂಡ ಸಿಸಿಬಿ ಪೊಲೀಸರು ಬೆಂಗಳೂರಿಗೆ ತೆರಳಿ ನೈಜೀರಿಯಾ ಪ್ರಜೆಯನ್ನು ಬಂಧಿಸಿದ್ದಾರೆ.
ನೈಜೀರಿಯಾ ಪ್ರಜೆ ಬಳಿ ಇದ್ದ 17 ಸಿಮ್ ಕಾರ್ಡ್, ಆತನ ಪಾಸ್‌ಪೋರ್ಟ್ ಸಹಿತ ಎಲ್ಲ ದಾಖಲೆಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಚಿಪ್ಸ್ ಪ್ಯಾಕೆಟ್ಗಳಲ್ಲಿ ಡ್ರಗ್ಸ್ ಪೂರೈಕೆ
ಆರೋಪಿ ಸಣ್ಣ ಸಣ್ಣ ಪ್ಯಾಕೆಟ್ಗಳ ಮೂಲಕ ರಾಜ್ಯದ ಹಲವಡೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದನು. ಚಿಪ್ಸ್, ಬಿಸ್ಕೆಟ್ ಮತ್ತು ಗುಟ್ಕಾ ಪ್ಯಾಕೆಟ್ಗಳಲ್ಲಿ ಡ್ರಗ್ಸ್ ಹಾಕಿ ಮಾರಟ ಮಾಡುತ್ತಿದ್ದನು ಬಳಿಕ ಈ ಪ್ಯಾಕೆಟ್ಗಳನ್ನು ಕಸ ಎಸೆಯುವ ಜಾಗದಲ್ಲಿ ಎಸೆಯುತ್ತಿದ್ದನು. ಬಳಿಕ ಪೆಡ್ಲರ್ ಅದರ ಫೋಟೊ ತೆಗೆದು ಪೂರೈಕೆದಾರನಿಗೆ ಕಳುಹಿಸುತ್ತಿದ್ದನು. ಅವರು ಅಲ್ಲಿಂದ ಪ್ಯಾಕೆಟ್ ಅನ್ನು ತೆಗೆದುಕೊಂಡು ಹೋಗುತ್ತಿದ್ದರು. ಮಂಗಳೂರು ನಗರದಲ್ಲಿದ್ದ 50ಕ್ಕೂ ಅಧಿಕ ಡ್ರಗ್ಸ್ ಪ್ಯಾಕೆಟ್ಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Post a comment
Log in to write reviews