2024-12-24 06:44:16

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

“ಬಿಗ್‌ಬಾಸ್‌” ಸಹವಾಸ ಸಾಕು - ನಟ ಸುದೀಪ್‌..!? 

ಇದೀಗ ಎಲ್ಲೆಡೆ ಬಿಗ್‌ಬಾಸ್‌ ಕಾವು ಜೋರಾಗುತ್ತಿದೆ. ಹಾಗೆ ಬಿಗ್ಬಾಸ್ ಕನ್ನಡ 11ನೇ ಸೀಸನ್ ಆರಂಭಕ್ಕೂ ಕೌಂಡೌನ್‌ ಸ್ಟಾರ್ಟಾಗಿದೆ. ಇದೇ ಸೆಪ್ಟೆಂಬರ್ 29ರಂದು ಈ ರಿಯಾಲಿಟಿ ಶೋ ಆರಂಭವಾಗಲಿದೆ. ಈ ಬಾರಿಯ ಬಿಗ್‌ಬಾಸ್‌ 11ನೇ ಸೀಸನ್ಗೆ ಹೊಸ ಲೆಕ್ಕ ಎಂಬ ಟ್ಯಾಗ್ಲೈನ್ ಕೂಡ ನೀಡಲಾಗಿದೆ.  ಇದರಿಂದಾಗಿ  ಫ್ಯಾನ್ಸ್ ಸಾಕಷ್ಟು ನಿರೀಕ್ಷೆಯಿಂದ ಕಾಯ್ತಾ ಇದ್ದಾರೆ. ಇವೆಲ್ಲದರ ಮಧ್ಯೆ ನಟ ಸುದೀಪ್ ಬಿಗ್ಬಾಸ್ ಸಹವಾಸ ಸಾಕು ಅನಿಸಿದ್ದು ನಿಜ, ಅದಕ್ಕೆಲ್ಲ ಸುದ್ದಿಗೋಷ್ಠಿ ನಡೆಸುವ ಮೂಲಕ ಉತ್ತರ ಕೊಟ್ಟಿದ್ದಾರೆ.
ಸುದೀಪ್ ಏನಂದ್ರು? ನೋಡೋಣ ಬನ್ನಿ…
ಬಿಗ್ಬಾಸ್ ಸಹವಾಸ ಸಾಕು ಅನಿಸಿದ್ದು ನಿಜ. ಆದರೆ ಅದಕ್ಕೆ ಬೇರೆಯದ್ದೇ ಕಾರಣಗಳಿವೆ. ನಮ್‌ ಮಧ್ಯೆ ಯಾವುದೇ ಮನಸ್ತಾಪ ಇರಲಿಲ್ಲ. ಇದರ ಬದಲಿಗೆ ಸಿನಿಮಾ ಕಡೆ ಒಂದಷ್ಟು ಗಮನ ನೀಡೋಣ ಎಂದಿದ್ದೆ. ಕೊನೆಗೆ ಬಿಗ್ಬಾಸ್ ಟೀಮ್ ನನ್ನ ಮನೆಗೆ ಭೇಟಿ ನೀಡಿ ಮನವೊಲಿಸಿದರು ಎಂದಿದ್ದಾರೆ ಕಿಚ್ಚ.
ಇನ್ನು ಬಿಗ್ಬಾಸ್ ನನ್ನ ಜೀವನದ ಭಾಗವಾಗಿದೆ. ಕಳೆದ 10 ವರ್ಷಗಳಿಂದ ಬಿಗ್ಬಾಸ್ ನಡೆಸಿಕೊಂಡು ಬಂದಿದ್ದೇನೆ. ಮನೆಗೆ ಬಂದ ಬಿಗ್ಬಾಸ್ ಟೀಮ್ ಎಲ್ಲವನ್ನು ವಿವರಿಸಿತು. ಅಂದ ಹಾಗೆ ಬಿಗ್ಬಾಸ್ಗೆ ನನಗೆ ಏನೋ ಒಂದು ರೀತಿ ಅವಿನಾಭಾವ ಸಂಬಂಧವಿದೆ. ಹಾಗಾಗಿ ಈ ಬಾರಿಯೂ ಬಿಗ್ಬಾಸ್ ನಿರೂಪಣೆಯನ್ನು ಒಪ್ಪಿಕೊಳ್ಳುವಂತಾಯಿತು ಎಂದರು ಸುದೀಪ್.
ವದಂತಿಗೆ ಫುಲ್ ಸ್ಟಾಪ್ ಇಟ್ಟ ಸುದೀಪ್…!
ಈ ಹಿಂದೆ ಸಹ ಸುದೀಪ್ ಬಿಗ್ಬಾಸ್ ಶೋ ಇಂದ ಹಿಂದೆ ಸರಿಯಲಿದ್ದಾರೆ ಎಂಬ ವದಂತಿಗಳು ಸಾಕಷ್ಟು ಹರಿದಾಡುತ್ತಿತ್ತು. ಈ ಸಲ ಬಿಗ್ಬಾಸ್ ಆ್ಯಂಕರ್ ಯಾರಾಗಲಿದ್ದಾರೆ? ಎನ್ನುವ ಚರ್ಚೆ ಬಹಳ ಜೋರಾಗಿತ್ತು. ರಮೇಶ್ ಅರವಿಂದ್, ರಿಷಬ್ ಶೆಟ್ಟಿ, ಗಣೇಶ್, ಶಿವಣ್ಣ ಯಾರಾದ್ರೂ ಒಬ್ಬರು ಬಿಗ್ಬಾಸ್ ಶೋ ನಡೆಸಿಕೊಡಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದು ನಿಜ. ಆದರೆ ಇಂದು ನಟ ಸುದೀಪ್‌ ಆ ಎಲ್ಲಾ ವದಂತಿಗೂ ಫುಲ್ ಸ್ಟಾಪ್ ಇಟ್ಟಿದ್ದಾರೆ.

Post a comment

No Reviews