
ಈ ಬಾರೀ ಬಿಗ್ ಬಾಸ್‌ನಲ್ಲಿ ಸ್ವರ್ಗ ಮತ್ತು ನರಕ ಎನ್ನುವ ಕಾನ್ಸೆಪ್ಟ್ ಮಾಡಲಾಗಿದೆ. ಸ್ವರ್ಗದಲ್ಲಿ ಇರುವವರಿಗೆ ಎಲ್ಲಾ ಸೌಕರ್ಯ ಸಿಗುತ್ತಿದೆ. ಆದ್ರೆ ನರಕದಲ್ಲಿ ಇರುವವರಿಗೆ ಸಾಮಾನ್ಯ ಸೌಲಭ್ಯ ಮಾತ್ರ ಒದಗಿಸಲಾಗುತ್ತಿದೆ. ಇನ್ನು ಎರಡು ತಂಡವರಿಗೂ ಬಿಗ್ ಬಾಸ್ ಟಾಸ್ಕ್ ಒಂದು ನೀಡಿದ್ದು, ಟಾಸ್ಕ್ ಆಡುವ ವೇಳೆ ಅವಘಡ ಸಂಭವಿಸಿದೆ.
ಆಟsamದ ವೇಳೆ ತ್ರಿವಿಕ್ರಂಗೆ ಗಾಯ ಆಗಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಅವರು ಆಸ್ಪತ್ರೆಗೆ ಸೇರಿದ್ದಾರೆ ಎಂದು ವರದಿ ಆಗಿದೆ. ಟಾಸ್ಕ್ ವೇಳೆ ಆದ ಅವಘಡದಿಂದ ಇಡೀ ಬಿಗ್ ಬಾಸ್ ಮನೆ ಆತಂಕಕ್ಕೆ ಒಳಗಾಗಿದೆ.
ಸದ್ಯ ಟಾಸ್ಕ್ ಆಡುವಾಗ ಚೆಂಡು ಹಿಡಿದು ಓಡುತ್ತಿದ್ದ ತ್ರಿವಿಕ್ರಂ ಅವರು ಬಿದ್ದಿದ್ದಾರೆ. ಇದರಿಂದ ಅವರಿಗೆ ಪೆಟ್ಟಾಗಿದೆ. ಅವರನ್ನು ಕನ್ಫೆಷನ್ ರೂಂಗೆ ಕರೆತರುವಂತೆ ಬಿಗ್ ಬಾಸ್ ಸೂಚನೆ ನೀಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ಆಗಿದೆ. ಅವರು ಚಿಕಿತ್ಸೆ ಪಡೆದು ದೊಡ್ಮನೆ ಒಳಗೆ ಬಂದಿದ್ದಾರಂತೆ. ಅದೇ ರೀತಿ ಗೋಲ್ಡ್ ಸುರೇಶ್ಗೂ ಪೆಟ್ಟಾಗಿದೆ ಎಂದು ಹೇಳಲಾಗುತ್ತಿದೆ. ಈ ಮೊದಲು ಬಿಗ್ ಬಾಸ್ ನಲ್ಲಿ ಟಾಸ್ಕ್ ಆಡುವಾಗ ಸಾಕಷ್ಟು ತೊಂದರೆಗಳು ಆಗಿದ್ದು ಇದೆ. ಕಳೆದ ಸೀಸನ್ನಲ್ಲಿ ಪ್ರತಾಪ್ ಹಾಗೂ ಸಂಗೀತಾ ಕಣ್ಣಿಗೆ ಹಾನಿ ಆಗಿತ್ತು. ಅವರು 2-3 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದಿದ್ದರು. ಈಗ ತ್ರಿವಿಕ್ರಂ ಹಾಗೂ ಗೋಲ್ಡ್ ಸುರೇಶ್ ಅವರು ಮೊದಲನೇ ವಾರವೇ ಆಸ್ಪತ್ರೆ ಸೇರಿ ಬಂದಿದ್ದಾರೆ.
Poll (Public Option)

Post a comment
Log in to write reviews