
ಧ್ರುವ ಸರ್ಜಾ ನಟನೆಯ ಕೆ. ಡಿ ಚಿತ್ರದ ಬಿಗ್ ಅಪ್ಡೇಟ್ ಇದೇ ಮೇ 26 ಕ್ಕೆ ಹೊರ ಬೀಳಲಿದೆ ಎಂದು ಚಿತ್ರತಂಡ ತಿಳಿಸಿದೆ. ಇದರ ಬಗ್ಗೆ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವ ಕೆವಿಎನ್ ಸಂಸ್ಥೆಯು ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಬಹಳ ಹಿಂದೆಯೇ ಶೂಟಿಂಗ್ ಆರಂಭಿಸಿದ್ದ ಚಿತ್ರತಂಡ ಇದುವರೆಗೂ ಒಂದು ಟೀಸರ್ ಹಾಗೂ ಕೆಲವು ಪೋಸ್ಟರ್ ಗಳನ್ನು ಮಾತ್ರ ಬಿಡುಗಡೆ ಮಾಡಿತ್ತು. ಇದರಿಂದ ಅಪ್ಡೇಟ್ ಗಳಿಗಾಗಿ ಕಾದು ಕುಳಿತಿದ್ದ ಧ್ರುವ ಸರ್ಜಾ ಅಭಿಮಾನಿಗಳಿಗೆ ಈ ಅಪ್ಡೇಟ್ ಸಖತ್ ಖಷಿಯನ್ನು ನೀಡಿದೆ.
ಈ ಸಿನಿಮಾದಲ್ಲಿ ಬಹು ದೊಡ್ಡ ತಾರಾಬಳಗವೇ ಇದ್ದು, ರಮೇಶ ಅರವಿಂದ್ ರವಿಚಂದ್ರನ್ ಶಿಲ್ಪಾ ಶೆಟ್ಟಿ ಸೇರಿದಂತೆ ಪ್ರಮುಖ ಕಲಾವಿದರು ಇದರಲ್ಲಿನಟಿಸುತ್ತಿದ್ದಾರೆ. ಈ ಸಿನಿಮಾಗೆ ಜೋಗಿ ಪ್ರೇಮ್ ನಿರ್ದೇಶನವಿದ್ದು, ಧ್ರುವಗೆ ನಾಯಕಿಯಾಗಿ ರೇಷ್ಮಾ ನಾಣಯ್ಯ ನಟಿಸುತ್ತಿದ್ದಾರೆ.
Poll (Public Option)

Post a comment
Log in to write reviews