
ರಾಕಿಂಗ್ ಸ್ಟಾರ್ ಯಶ್ ಇನ್ಸ್ಟಾಗ್ರಾಮ್ ನಲ್ಲಿ ಹಾಕಿರುವ ಪೋಲ್ ಈಗ ಎಲ್ಲೆಡೆ ವೈರಲ್ ಆಗ್ತಿದೆ. ಈ ಮೂಲಕ ರಾಕಿ ಬಾಯ್ ಏನಾದರೂ ಹೊಸ ಅಪ್ಡೇಟ್ ನೀಡಲಿದ್ದಾರಾ ಎಂಬ ಕುತೂಹಲ ಅಭಿಮಾನಿಗಳ ವಲಯದಲ್ಲಿ ಮೂಡಿದೆ.
ಯಶ್ ಈಗ ಟಾಕ್ಸಿಕ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ಸದ್ದಿಲ್ಲದೆ ಸಿನಿಮಾ ಶೂಟಿಂಗ್ ಶುರು ಮಾಡಿದ್ದಾರೆ. ಈ ನಡುವೆ ಯಶ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಲ್ ಒಂದನ್ನ ಹಾಕಿದ್ದಾರೆ. ಅದರಲ್ಲಿ ನಾನು ಸಾಮಾಜಿಕ ಮಾಧ್ಯಮದಲ್ಲಿ ಇನ್ನಷ್ಟು ಪೋಸ್ಟ್ ಮಾಡಬೇಕೆ.? ಎಂದು ಬರೆದು ಕೊಂಡಿದ್ದಾರೆ. ಇದರಿಂದಾಗಿ ಯಶ್ ಅವರ ಅಭಿಮಾನಿಗಳು ಟಾಕ್ಸಿಕ್ ಸಿನಿಮಾದಿಂದ ಏನಾದ್ರೂ ಹೊಸ ಅಪ್ಡೇಟ್ ಸಿಗಲಿದ್ಯಾ ಎಂದು ಕಾಯುತ್ತಿದ್ದಾರೆ.
Poll (Public Option)

Post a comment
Log in to write reviews