ಲಾಕಪ್ ಡೆತ್ ಕೇಸ್ ದೊಡ್ಡ ತಿರುವು? ಆದಿಲ್ಗೆ ಯಾವುದೆ ಕಾಯಿಲೆ ಇರಲಿಲ್ಲ: ಮೃತನ ಚಿಕ್ಕಪ್ಪ ಮೆಹಬೂಬ್ ಆಕ್ರೋಶ.

ದಾವಣಗೆರೆ: ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಆರೋಪಿ ಆದಿಲ್ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದ್ದು ಆದಿಲ್ ತಂದೆ ಖಲೀಮುಲ್ಲಾ ಮತ್ತು ಚಿಕ್ಕಪ್ಪ ಮೆಹಬೂಬ್ ಅಲಿ ಗೊಂದಲ ಹೇಳಿಕೆ ನೀಡಿದ್ದಾರೆ. ನನ್ನ ಪುತ್ರನ ಸಾವಿಗೆ ಪೊಲೀಸರೇ ಕಾರಣ. ಆದಿಲ್ ಬೆನ್ನಿಗೆ ಗಾಯ ಆಗಿದೆ, ಚರ್ಮ ಕೆಂಪಾಗಿರುವುದು ಕಂಡು ಬಂದಿದೆ. ನನ್ನ ಪುತ್ರ ಆದಿಲ್ಗೆ ಮೂರ್ಛೆ ರೋಗ ಇಲ್ಲ ಎಂದು ಹೇಳಿದರು. 30 ವರ್ಷದಿಂದ ಆದಿಲ್ ನನ್ನು ನಾನೇ ಸಾಕಿದ್ದು, ಅವನಿಗೆ ಯಾವುದೇ ಕಾಯಿಲೆ ಇರಲಿಲ್ಲ. ವೈದ್ಯಕೀಯ ವರದಿ ಬರಲಿ, ಸತ್ಯ ಗೊತ್ತಾಗುತ್ತದೆ ಎಂದು ಆದಿಲ್ ಚಿಕ್ಕಪ್ಪ ಮೆಹಬೂಬ್ ಅಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಆದಿಲ್ ತಂದೆ ಖಲೀಮುಲ್ಲಾ, ನನ್ನ ಮಗನ ಮೈಮೇಲೆ ಯಾವುದೇ ಗಾಯಗಳಿರಲಿಲ್ಲ. ಪೊಲೀಸರ ಹಲ್ಲೆಯಿಂದ ನನ್ನ ಮಗ ಮೃತಪಟ್ಟಿಲ್ಲ. ಲೋ ಬಿಪಿಯಾಗಿ ಮೃತಪಟ್ಟಿದ್ದಾನೆ. ನನ್ನ ಮಗ ಆದಿಲ್ ಗೆ ಯಾವುದೇ ಮೂರ್ಛೆ ರೋಗ ಇರಲಿಲ್ಲ. ಆತನ ಸಾವಿನ ಬಗ್ಗೆ ನಮಗೆ ಯಾವುದೇ ರೀತಿ ಅನುಮಾನ ಇಲ್ಲ. ಠಾಣೆಗೆ ಕಲ್ಲು ಹೊಡೆದವರು ಯಾರು ಅನ್ನೋದು ನನಗೆ ಗೊತ್ತಿಲ್ಲ. ಸರ್ಕಾರ ನನಗೆ ಪರಿಹಾರ ಕೊಡಬೇಕು ಎಂದು ಖಲೀಮುಲ್ಲಾ ಆಗ್ರಹಿಸಿದರು
Poll (Public Option)

Post a comment
Log in to write reviews