
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಕೇರ್ ಆಫ್ ಪರಪ್ಪನ ಅಗ್ರಹಾರ ಆಗಿದ್ದ ನಟ ದರ್ಶನ್ ತೂಗುದೀಪ, ಜೈಲಿನಲ್ಲಿದ್ದರೂ 'ಬಾಸ್' ರೀತಿ ಐಷಾರಾಮಿ ಜೀವನ ನಡೆಸಿದ್ದಕ್ಕೆ ಹಲವು ಸಾಕ್ಷಿಗಳು ದೊರೆತಿವೆ. ನಟ ದರ್ಶನ್ ಜೈಲಿನಲ್ಲಿ ವಿಡಿಯೋ ಕಾಲ್ ಮೂಲಕ ಹೊರಗಿರುವ ವ್ಯಕ್ತಿಯೊಂದಿಗೆ ಮಾತನಾಡಿದ್ದರು. ಈ ಪ್ರಕರಣ ಬೇಧಿಸಿರುವ ಪೊಲೀಸರು ದರ್ಶನ್ ಬಳಸಿದ್ದು ಸೆಕೆಂಡ್ ಹ್ಯಾಂಡ್ ಒನ್ ಪ್ಲಸ್ ಬ್ರ್ಯಾಂಡ್ ಮೊಬೈಲ್ ಎಂಬುದನ್ನು ಪತ್ತೆ ಮಾಡಿದ್ದಾರೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ದರ್ಶನ್‌ಗೆ ಇದೀಗ ಬಿಗ್ ರಿಲೀಫ್ ಸಿಕ್ಕಿದೆ.
ನಟ ದರ್ಶನ್ ಕೊಲೆ ಕೇಸಿನಲ್ಲಿ ಜೈಲು ಸೇರಿ ಮೂರು ತಿಂಗಳುಗಳೇ ಕಳೆದಿವೆ. ಆದರೆ, ಕೊಲೆ ಕೇಸಿನಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ನಟ ದರ್ಶನ್‌ಗೆ ಐಷಾರಾಮಿ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಬಳಿಕ ಇದರ ಬೆನ್ನಲ್ಲಿಯೇ ದರ್ಶನ್‌ನಲ್ಲಿ ಬಳ್ಳಾರಿ ಸೆಂಟ್ರಲ್ ಜೈಲಿಗೆ ರವಾನಿಸಲಾಗಿತ್ತು. ಆದರೆ, ಇದೀಗ ದರ್ಶನ್ ವಿಡಿಯೋ ಕಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಮ್ ಹಾಗೂ ಮೊಬೈಲ್ ಕೊಟ್ಟ ವ್ಯಕ್ತಿಯನ್ನು ಪೊಲೀಸರು ಬಂಧಿಸುವ ಮೂಲಕ ನಟ ದರ್ಶನ್‌ಗೆ ರಿಲೀಫ್ ಸಿಕ್ಕಂತಾಗಲಿದೆ. ಇನ್ನು ಜೈಲಿನಲ್ಲಿ ನಟ ದರ್ಶನ್‌ಗೆ ಮೊಬೈಲ್ ಕೊಟ್ಟು ಮಾತನಾಡುವಂತೆ ಮನವಿ ಮಾಡಿದ್ದ ರೌಡಿ ಶೀಟರ್ ಧರ್ಮನಿಗೆ ಮೊಬೈಲ್ ಹಾಗೂ ಸಿಮ್ ಕೊಟ್ಟವರು ಬಾಣಸವಾಡಿಯ ಟೂರ್ಸ್ ಅಂಡ್ ಟ್ರಾವೆಲ್ಸ್ ಮಾಲೀಕ ಮಣಿವಣ್ಣನ್‌ನನ್ನು ಪೊಲೀಸರು ಬಂಧಿಸಿದ್ದಾರೆ.
Poll (Public Option)

Post a comment
Log in to write reviews