
ಬೆಂಗಳೂರು: ಕನ್ನಡದ ಬಿಗ್‌ಬಾಸ್ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ 'ರಾಮರಸ' ಮೂಲಕ ಬೆಳ್ಳಿ ಪರದೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ.
ಸಾಗರ್ ಪುರಾಣಿಕ್ ಅವರ ʼಡೊಳ್ಳುʼ ಚಿತ್ರದ ಮೂಲಕ ಈ ಹಿಂದೆ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಕಾರ್ತಿಕ್ ಮಹೇಶ್ ಇದೀಗ 'ರಾಮರಸ' ಚಿತ್ರದ ಮೂಲಕ ಮತ್ತೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕಾರ್ತಿಕ್ ಮೊದಲ ಚಿತ್ರ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದು ಮಾತ್ರವಲ್ಲದೇ ರಾಷ್ಟ್ರ ಪ್ರಶಸ್ತಿ ಗೆದ್ದುಕೊಂಡಿತ್ತು. ಇದೀಗ ರಾಮರಸ ಚಿತ್ರದ ಮೂಲಕ ಮತ್ತೆ ಬೆಳ್ಳಿ ಪರದೆ ಮೇಲೆ ಮಿಂಚಲು ಸಿದ್ಧರಾಗಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾರ್ತಿಕ್, ಡೊಳ್ಳು ಚಿತ್ರದ ಮೂಲಕ ನಾನು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ರಾಮರಸ ನನ್ನ ಮೊದಲ ಕಮರ್ಷಿಯಲ್ ಚಿತ್ರವಾಗಿದೆ. ಇದರಲ್ಲಿ ನಾನು ವಿಭಿನ್ನ ಪಾತ್ರದಲ್ಲಿಕಾಣಿಸಿಕೊಳ್ಳಲಿದ್ದೇನೆ. ಇದು ಪರಿಕಲ್ಪನೆ ಆಧಾರಿತ ವಾಣಿಜ್ಯ ಮನೋರಂಜನೆಯಾಗಿದೆ ಎಂದರು.
ಕಾರ್ತಿಕ್ ಮಹೇಶ್ ನಟನೆಯ ‘ರಾಮರಸ’ ಸಿನಿಮಾದ ಸುದ್ದಿಗೋಷ್ಠಿಗೆ ನಟ ಸುದೀಪ್ ಅವರು ಅತಿಥಿಯಾಗಿ ಆಗಮಿಸಿದ್ದರು. ನೂತನ ‘ರಾಮರಸ’ ಸಿನಿಮಾದ ಹೀರೋ ಆಗಿ ಕಾರ್ತಿಕ್ ಮಹೇಶ್ ಅವರನ್ನು ಸುದೀಪ್ ಲಾಂಚ್ ಮಾಡಿದ್ದು, ಸುದೀಪ್ ಅವರಿಂದ ಹೀರೋ ಆಗಿ ಲಾಂಚ್ ಆದ ಕಾರ್ತಿಕ್ ಮಹೇಶ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ರಾಮರಸ ಚಿತ್ರವನ್ನು ಜಿ-ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಗುರು ದೇಶಪಾಂಡೆ ನಿರ್ಮಿಸಿದ್ದು, ಗಿರಿರಾಜ್ ಬಿ.ಎಂ.ನಿರ್ದೇಶಿಸಿದ್ದಾರೆ.
Poll (Public Option)

Post a comment
Log in to write reviews