
ಚಿಕ್ಕಮಗಳೂರು: ಮಾವನ ಮನೆಯ ಪಿತೃಪಕ್ಷದ ಊಟಕ್ಕೆ ಹೋಗಲು ತಡವಾಗುತ್ತೆಂದು ವ್ಯಕ್ತಿಯೋರ್ವ ಪೊಲೀಸ್ ಜೀಪ್ ಕರೆಸಿಕೊಂಡ ಅಚ್ಚರಿಯ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದ ಅಶೋಕ್ ಎಂಬ ವ್ಯಕ್ತಿ 112 ನಂಬರ್ಗೆ ಫೋನ್ ಮಾಡಿ ‘ಸರ್.. ಗಲಾಟೆ ಬೇಗ ಬನ್ನಿ’ ಅಂತ ಮನವಿ ಮಾಡಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರಿಗೆ ಮಾವನ ಮನೆಗೆ ಡ್ರಾಪ್ ಮಾಡುವಂತೆ ಕೇಳಿಕೊಂಡಿದ್ದಾನೆ.
ಗಾಡಿ ಯಾವು ಇಲ್ಲ. ಮಳೆ ಬೇರೆ ಬರ್ತ ಇದೆ, ಪಲ್ಗುಣಿ ಗ್ರಾಮಕ್ಕೆ ಡ್ರಾಪ್ ಮಾಡುವಂತೆ ರಿಕ್ವೆಸ್ಟ್ ಮಾಡಿಕೊಂಡಿದ್ದಾನೆ. ಅತ್ತ ಪೊಲೀಸರಿಗೆ ಒಂದು ಕ್ಷಣ ಬೈಯ್ಯಬೇಕೋ, ನಗಬೇಕೋ ಎಂದು ತಿಳಿಯದೇ ಕೊನೆಗೆ ಡ್ರಾಪ್ ನೀಡಿದ್ದಾನೆ.
ಮಾವನ ಮನೆಗೆ ಊಟಕ್ಕೆ ಹೊರಟಿದ್ದ ಅಶೋಕ್ಗೆ ಪೊಲೀಸರು ಬುದ್ದಿವಾದ ಹೇಳಿ. ಕೊನೆಗೆ ಪೊಲೀಸರು ಲಾರಿ ಅಡ್ಡ ಹಾಕಿ ಆ ವ್ಯಕ್ತಿಯನ್ನ ಮಾವನ ಮನೆಗೆ ಕಳಿಸಿದ್ದಾರೆ
Poll (Public Option)

Post a comment
Log in to write reviews