2024-09-19 04:40:08

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಸೊರಗಿದ್ದ ಸ್ಯಾಂಡಲ್‌ವುಡ್‌ಗೆ ಜೀವಕಳೆ ತಂದುಕೊಟ್ಟ 'ಭೀಮ'


'ದುನಿಯಾ' ವಿಜಯ್ ಅಭಿನಯದ 'ಭೀಮ' ಸಿನಿಮಾವು ಆಗಸ್ಟ್ 9ರಂದು ತೆರೆಕಂಡಿತ್ತು. ಈ ವರ್ಷದ ಆರಂಭದಿಂದಲೂ ಕನ್ನಡ ಸಿನಿಮಾಗಳು ಅಷ್ಟೇನೂ ಸದ್ದು ಮಾಡಿರಲಿಲ್ಲ. ಆದರೆ 'ಭೀಮ' ಆ ಕೊರಗನ್ನು ನೀಗಿಸುತ್ತಾನೆ ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ ಅದಕ್ಕೆ ಪೂರಕವಾದ ಬೆಳವಣಿಗೆ ಕಂಡುಬಂದಿದೆ. 'ಭೀಮ' ಸಿನಿಮಾವು ಮೊದಲ ವಾರಾಂತ್ಯಕ್ಕೆ ಭರ್ತಿ 11.15 ಕೋಟಿ ರೂ. ಬಾಚಿಕೊಂಡಿದೆ.
'ಈ ಸಿನಿಮಾವು ರಾಜ್ಯಾದ್ಯಂತ 400ಕ್ಕೂ ಅಧಿಕ ಸ್ಕ್ರೀನ್‌ ಮೇಲೆ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ 'ಎ' ಪ್ರಮಾಣ ಪತ್ರ ಸಿಕ್ಕಿದೆ. ಜೊತೆಗೆ ಮಿಶ್ರ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಆದರೂ 'ಭೀಮ' ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ತನ್ನ ಬಲ ಪ್ರದರ್ಶನ ಮಾಡಿರುವುದು ವಿಶೇಷ. 
ಮೊದಲ ದಿನ ಈ ಸಿನಿಮಾವು 3.95 ಕೋಟಿ ರೂ. ಬಾಚಿಕೊಂಡಿದ್ದರೆ, ಎರಡನೇ ದಿನ 3.40 ಕೋಟಿ ರೂ. ಗಳಿಕೆ ಆಗಿತ್ತು. ಇನ್ನು, ಭಾನುವಾರ ರಜಾ ದಿನವಾದ್ದರಿಂದ ಗಳಿಕೆಯಲ್ಲಿ ಏರಿಕೆ ಆಗಿದೆ. ಮೂರನೇ ದಿನದ ಗಳಿಕೆ 3.80 ಕೋಟಿ ರೂ. ತಲುಪಿದೆ. ಒಟ್ಟು ಮೊದಲ ವಾರಾಂತ್ಯಕ್ಕೆ 11.15 ಕೋಟಿ ರೂ. ಗಳಿಕೆ ಆಗಿದೆ. ಮೊದಲ ವಾರಕ್ಕೆ ಒಟ್ಟಾರೆಯಾಗಿ 20 ಕೋಟಿ ರೂ.ಗಳಿಗೂ ಅಧಿಕ ಕಲೆಕ್ಷನ್ ಆಗುವ ಸಾಧ್ಯತೆ ಇದೆ. ಭೀಮ' ಟೀಮ್‌ನ ಮೂಲಗಳ ಪ್ರಕಾರ, 'ಭೀಮ' ಸಿನಿಮಾದ ಗ್ರಾಸ್ ಕಲೆಕ್ಷನ್ 15 ಕೋಟಿ ರೂ.ಗಳಿಕ್ಕಿಂತಲೂ ಜಾಸ್ತಿಯೇ ಆಗಿದೆಯಂತೆ. ಮಧ್ಯಾಹ್ನದ ನಂತರದ ಶೋಗಳಿಗೆ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದೆ. ಹಾಗಾಗಿ, ಕಲೆಕ್ಷನ್‌ನಲ್ಲಿ ಏರಿಕೆ ಆಗುವ ಮಾಹಿತಿ ಸಿಕ್ಕಿದೆ. ಇನ್ನು, 'ಭೀಮ' ಸಿನಿಮಾಗೆ 20 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಖರ್ಚು ಮಾಡಲಾಗಿದೆಯಂತೆ.
 

Post a comment

No Reviews