
ಪೆನ್ ಡ್ರೈವ್ ಪ್ರಕರಣ ಸಂಬಂಧ ಭವಾನಿ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ.
ಪೆನ್ ಡ್ರೈವ್ ಪ್ರಕರಣ ಸಂಬಂಧ ಎಸ್ಐಟಿ ನೋಟಿಸ್ ಪ್ರಶ್ನಿಸಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು. ಇದನ್ನು ಪ್ರಶ್ನಿಸಿ ಜನ ಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಾದ ಪ್ರತಿವಾದ ನಡೆದಿತ್ತು. ಎಸ್ಐಟಿ ಪರ ಎಸ್ಪಿಪಿ ಜಗದೀಶ ಬಲವಾದ ವಾದ ಮಂಡಿಸಿ ಜಾಮಿನು ನೀಡಬಾರದು ಎಂದು ಪ್ರತಿಪಾದಿಸಿದ್ದರು. ಭವಾನಿ ಪರ ಸಂದೇಶ್ ಚೌಟ ವಾದ ಮಂಡಿಸಿ, ಈ ಪ್ರಕರಣದಲ್ಲಿ ಭವಾನಿಯವರ ನೇರ ಪಾತ್ರವಿಲ್ಲ. ಇದೊಂದು ರಾಜಕೀಯ ಪ್ರೇರಿತ ಪ್ರಕರಣ ಎಂದು ವಾದ ಮಂಡಿಸಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾದೀಶರು ತೀರ್ಪು ಕಾಯ್ದಿರಿಸಿದ್ದು, ಶುಕ್ರವಾರ ಸಂಜೆ ವೇಳೆ ನ್ಯಾಯಾಲಯ ಭವಾನಿ ರೇವಣ್ಣ ಗೆ ಜಾಮೀನನ್ನು ಅರ್ಜಿಯನ್ನು ವಜಾ ಗೊಳಿಸಿದ್ದು ಬಂಧನನದ ಭೀತಿ ಎದುರಾಗಿದೆ.
Poll (Public Option)

Post a comment
Log in to write reviews