
ಶಿವರಾಜ್ಕುಮಾರ್ ನಟನೆಯ ‘ಭೈರತಿ ರಣಗಲ್’ ಸಿನಿಮಾ ತಂಡ ಈ ಮೊದಲು ಟೀಸರ್ ರಿಲೀಸ್ ಮಾಡಿದಾಗ ಆಗಸ್ಟ್ನಲ್ಲಿ ಸಿನಿಮಾ ರಿಲೀಸ್ ಮಾಡೋ ಘೋಷಣೆ ಮಾಡಿತ್ತು. ಆದರೆ, ಈಗ ನವೆಂಬರ್ 15ರಂದು ಸಿನಿಮಾ ರಿಲೀಸ್ ಡೇಟ್ನ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಗೀತಾ ಶಿವರಾಜ್ಕುಮಾರ್ ಮಾತನಾಡಿದ್ದಾರೆ. ನಿರ್ಧಾರದ ಹಿಂದಿನ ಕಾರಣ ತಿಳಿಸಿದ್ದಾರೆ. ‘ಬೇರೆ ಬೇರೆ ಸಿನಿಮಾಗಳು ಬರ್ತಿದೆ. ಅವೆಲ್ಲ ಕನ್ನಡ ಸಿನಿಮಾಗಳು. ಹೀಗಾಗಿ ರಿಲೀಸ್ ಡೇಟ್ ಮುಂದಕ್ಕೆ ಹಾಕಿದ್ದೇವೆ. ಯಾರಿಗೂ ತೊಂದರೆ ಆಗಬಾರದು ಎಂದು ಶಿವರಾಜ್ಕುಮಾರ್ ಈ ನಿರ್ಧಾರ ಮಾಡಿದ್ದಾರೆ. ಮಕ್ಕಳ ದಿನಾಚರಣೆ ಸಮಯದಲ್ಲೇ ನಮ್ಮ ಸಿನಿಮಾ ರಿಲೀಸ್ ಆಗುತ್ತಿದೆ’ ಎಂದಿದ್ದಾರೆ.
Poll (Public Option)

Post a comment
Log in to write reviews