ಹೈ ವೋಲ್ಟೇಜ್ ಲೈಟ್ ಬಳಸುವ ವಾಹನ ಸವಾರರೆ ಎಚ್ಚರ ! ರಾಜ್ಯಾದ್ಯಂತ 8244 ಕೇಸ್ ದಾಖಲು !

ಬೆಂಗಳೂರು: ಹೆಚ್ಚು ಬೆಳಕು ಹೊರಹೊಮ್ಮುವ ಹಾಗೂ ಕಣ್ಣಿನ ಮೇಲೆ ಪರಿಣಾಮ ಬೀರುವ ಹೈ ವೋಲ್ಟೇಜ್ ಹೆಡ್ ಲೈಟ್ ಬಳಸಿ ವಾಹನ ಚಲಾಯಿಸುವ ಚಾಲಕರಿಗೆ ಬಿಸಿ ಮುಟ್ಟಿಸುತ್ತಿರುವ ರಾಜ್ಯ ಪೊಲೀಸರು, ಕರ್ನಾಟಕದಾದ್ಯಂತ ಈ ವಾರ ಅಂದರೆ ಜುಲೈ 1ರಿಂದ ಜುಲೈ 7ರ ವರೆಗೆ ಹೆಚ್ಚುವರಿ 8244 ಪ್ರಕರಣಗಳನ್ನು ದಾಖಲಿಸಲಾಗಿದೆ.
ರಾತ್ರಿ ವೇಳೆ ಹೈ ವೋಲ್ಟೇಜ್ ಲೈಟ್ ಉಪಯೋಗದಿಂದ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಮೂಲಕ ಹೈ ವೋಲ್ಟೇಜ್ ಎಲ್ಇಡಿ ಹೆಡ್ ಲೈಟ್ ಹೊಂದಿರುವ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳಲಾಗುತ್ತಿದೆ. ಕಾರು, ಬೈಕ್ ಹಾಗೂ ಇತರ ವಾಹನಗಳಲ್ಲಿ ಕಣ್ಣು ಕುಕ್ಕುವಂತಹ ಎಲ್ಇಡಿ ಲೈಟ್‌ಗಳನ್ನು ಅಳವಡಿಸಿ ಇತರರಿಗೆ ತೊಂದರೆ ಉಂಟುಮಾಡುವವರ ವಿರುದ್ಧ ಕಾರ್ಯಾಚರಣೆ ಆರಂಭಿಸುವುದಾಗಿ ತಿಳಿಸಿದ್ದ ಕರ್ನಾಟಕ ಸಂಚಾರ ಪೊಲೀಸರು ಇದೀಗ ಬಿಸಿಮುಟ್ಟಿಸಲು ಕಾರ್ಯಾಚರಣೆ ಆರಂಭಿಸಿದ್ದು, ಕೇವಲ ಒಂದೇ ವಾರದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಸೇರಿಸಿದಂತೆ ಕರ್ನಾಟಕದಲ್ಲಿ ಒಟ್ಟೂ 8244 ಪ್ರಕರಣಗಳು ದಾಖಲಿಸಿಲಾಗಿದೆ. ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ. ಅಲ್ಲದೇ ಕ್ರಮ ಕೈಗೊಂಡ ಅಧಿಕಾರಿಗಳಿಗೆ ಅಲೋಕ್ ಕುಮಾರ್ ಅವರ ಎಕ್ಸ್ ಖಾತೆಯಲ್ಲಿ ಶ್ಲಾಘಿಸಿದ್ದಾರೆ.
Poll (Public Option)

Post a comment
Log in to write reviews