
ಲಖನೌ : ಬಿಜೆಪಿಯ ಸುಳ್ಳುಗಳ ಬಗ್ಗೆ ಮತ್ತು ಅದರ ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಎಚ್ಚರದಿಂದ ಇರುವಂತೆ ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಶುಕ್ರವಾರ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಶನಿವಾರದ ಮತದಾನದ ಬಗ್ಗೆ, ಮತದಾನದ ನಂತರದ ದಿನಗಳ ಬಗ್ಗೆ ಮತಎಣಿಕೆ ಮುಗಿದು ಮತ್ತು ಗೆಲುವಿನ ಪತ್ರ ಸಿಗುವವರೆಗೆ ಸಂಪೂರ್ಣವಾಗಿ ಬಿಜೆಪಿಯಿಂದ ಹಾದಿ ತಪ್ಪದಿರಿ ಎಂದು ಅಖಿಲೇಶ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಈ ವೇಳೆಯಲ್ಲಿ ನಡೆಯುವ ಘಟನೆಗಳ ಬಗ್ಗೆ ಜಾಗ್ರತೆಯಿಂದ ಇರಬೇಕು. ಬಿಜೆಪಿಯು ತನ್ನ ಮಾಧ್ಯಮ ಗುಂಪಿನ ಮೂಲಕ ಬೇರೆ ಬೇರೆ ಸುದ್ದಿ ವಾಹಿನಿಗಳಲ್ಲಿ ಪಕ್ಷ 300 ಸ್ಥಾನ ಗಳಿಸಿದೆ ಎಂದು ಸಂಪೂರ್ಣ ಸುಳ್ಳು ಸುದ್ದಿ ಹರಡಲು ಆರಂಭಿಸುತ್ತದೆ. ಚುನಾವಣೆಯಲ್ಲಿ ಹೇಗೂ ಇಂಡಿಯಾ ಒಕ್ಕೂಟ ಗೆದ್ದು ಸರ್ಕಾರ ರಚನೆ ಮಾಡುತ್ತದೆ. ಹೀಗಾಗಿ ಎರಡು ಮೂರು ದಿನಗಳ ಮಟ್ಟಿಗೆ ಈ ರೀತಿ ಸುಳ್ಳು ಸುದ್ಧಿ ಹಬ್ಬಿಸಿ ಬಿಜೆಪಿ ಏನು ತಾನೇ ಸಾಧಿಸುತ್ತದೆ ಎಂದು ನಿಮಗೆ ಅನಿಸಬಹುದು. ನೆನಪಿರಲಿ. ಇದು ನಿಮ್ಮ ಎದೆಗುಂದಿಸುವುದು ಅವರ ತಂತ್ರ. ಹಾಗೆ ಮಾಡಿದಾಗ ನಿಮ್ಮ ಕುತೂಹಲ ಕಡಿಮೆ ಆಗಿ, ಮತ ಎಣಿಕೆಯ ದಿನ ನೀವು ಎಚ್ಚರಿಕೆಯಿಂದ ಇರುವುದಿಲ್ಲ. ನಿಮ್ಮ ಆತ್ಮವಿಶ್ವಾಸ ಕಾಪಾಡಿಕೊಳ್ಳಿ ಎಂದು ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.
Poll (Public Option)

Post a comment
Log in to write reviews