
ಸ್ವಾತಂತ್ರ್ಯ ಸಂಗ್ರಾಮದ ವೀರರಾಣಿ ಕಿತ್ತೂರು ಚನ್ನಮ್ಮ ಬ್ರಿಟಿಷರ ವಿರುದ್ದ ಸ್ವಾತಂತ್ರ್ಯದ ಕಹಳೆ ಊದಿ ಬ್ರಿಟಿಷ್ ಅಧಿಕಾರಿ ಥ್ಯಾಕ್ರೆಯ ರುಂಡ ಚಂಡಾಡಿ ಇಂದಿಗೆ 200 ವರ್ಷಗಳ ಸಂಭ್ರಮವಾಗಿದೆ.
ಬ್ರಿಟಿಷರಿನ್ನ ಕಿತ್ತೂರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ವಿಜಯ ಸಾಧಿಸಿದ್ದ ಪ್ರತೀಕವಾಗಿ ಆಚರಿಸುವ ಕಿತ್ತೂರು ಉತ್ಸವಕ್ಕೆ ಇಂದು ಅದ್ದೂರಿ ಚಾಲನೆ ನೀಡಲಾಯಿತು. ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಅದ್ದೂರಿ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಚಾಲನೆ ನೀಡಿದ್ದಾರೆ.
ಬಳಿಕ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು, ಈ ಬಾರಿಯೂ 5 ಕೋಟಿ ರೂ. ಕಿತ್ತೂರು ಅಭಿವೃದ್ಧಿಗೆ ನೀಡುತ್ತೇವೆ. ವಿಜಯಪುರದ ರಾಣಿ ಚೆನ್ನಮ್ಮ ಅಧ್ಯಯನ ಕೇಂದ್ರವನ್ನು ಬೆಳಗಾವಿಗೆ ಶಿಫ್ಟ್ ಮಾಡುತ್ತೇವೆ. ಚೆನ್ನಮ್ಮ ಹೆಸರಿನ ಮುಂದೆ ಕಿತ್ತೂರು ಸೇರಿಸಿ ವಿವಿ ಅಂತ ಮಾಡುತ್ತೇವೆ. ಮಾನವ ಸಂಗ್ರಹಾಲಯ ಮಾಡುವ ಠರಾವು ಮಾಡಿದ್ದಾರೆ. ಒಟ್ಟಾರೆ ಕಿತ್ತೂರು ಅಭಿವೃದ್ಧಿ ಮಾಡುವುದಾಗಿ ಸಚಿವ ಸತೀಶ್ ಭರವಸೆ ನೀಡಿದ್ದಾರೆ.
Poll (Public Option)

Post a comment
Log in to write reviews